ನವದೆಹಲಿ : ರಾಜ್ಯ ವಿಧಾನಸಭಾ ಚುನಾವಣೆಗೆ ಏ. 10 ರ ಒಳಗೆ ಎಲ್ಲ ಕ್ಷೇತ್ರಗಳ ಟಿಕೆಟ್ ಹಂಚಿಕೆ ಅಂತಿಮಗೊಳಿಸಲಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೆಲ್ಲುವ ಅಭ್ಯರ್ಥಿಗಳಿಗೆ ಟಿಕೆಟ್ ನೀಡುವುದೇ ಪ್ರಮುಖ ಮಾನದಂಡವಾಗಿದ್ದು, ಬೇರೆ ಪಕ್ಷದಿಂದ ಬಂದವರಿಗೆ ಟಿಕೆಟ್ ನೀಡುತ್ತೇವೆ ಎಂದು ನಾವೇನೂ ಭರವಸೆ ನೀಡಿಲ್ಲ, ಚುನಾವಣೆ ಬಗ್ಗೆ 3 ಸಮೀಕ್ಷೆಗಳನ್ನು ಮಾಡಿಸಿದ್ದು, 2 ಕೈಸೇರಿವೆ. ಮೂರನೇ ವರದಿ ಏಪ್ರಿಲ್ ಮೊದಲ ವಾರದಲ್ಲಿ ಸಿಗಲಿದೆ. ಏ. 10 ರೊಳಗೆ ಎಲ್ಲಾ  ಟಿಕೆಟ್ ಫೈನಲ್ ಆಗುವ ಸಾಧ್ಯತೆಯ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.