ಹೈದರಾಬಾದ್​: ಏಪ್ರಿಲ್​​ 14ರಿಂದ ಜೂನ್​ 3ರವರೆಗೆ ದೇಶದಲ್ಲಿ ಲಾಕ್​ಡೌನ್​ ಆದೇಶ ಮುಂದುವರಿಸುವುದು ಒಳ್ಳೆಯದು ಎಂದು ಕೆ.ಚಂದ್ರಶೇಖರ್​ ರಾವ್​ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಹಿಂಜರಿಯದೆ ಲಾಕ್ ಡೌನ್ ವಿಸ್ತರಿಸಲು ಪ್ರಧಾನಿ ಮತ್ತು ಭಾರತ ಸರ್ಕಾರಕ್ಕೆ ಮನವಿ ಮಾಡುತ್ತಿದ್ದೇನೆ. ಈ ರೋಗದ ಹರಡುವಿಕೆಯನ್ನು ನಿಯಂತ್ರಿಸಲು ಮತ್ತು ಯುಎಸ್, ಸ್ಪೇನ್ ಮತ್ತು ಇಟಲಿಯಂತಹ ದೇಶಗಳು ಎದುರಿಸುತ್ತಿರುವ ಪರಿಸ್ಥಿತಿಯನ್ನು ತಪ್ಪಿಸಲು ನಾವು ಹೊಂದಿರುವ ಏಕೈಕ ಅಸ್ತ್ರವೆಂದರೆ ಲಾಕ್‌ಡೌನ್ ಅಂತ ಅವರು ಹೇಳಿದ್ದಾರೆ.