ಚಿತ್ರದುರ್ಗ: ಇಂಹದ್ದೊಂದು ಡೈಲಾಗ್ ಹೇಳಿದ್ದು ಮುಖ್ಯ ಮಂತ್ರಿ ಸಿದ್ದರಾಮಯ್ಯರು  ಹೊಳಲ್ಕೆರೆಯಲ್ಲಿ ನಡೆಯುತ್ತಿರುವ ವಿವಿಧ ಕಾಮಗಾರಿಗಳ  ಉದ್ಘಾಟನಾ ಕಾರ್ಯಕ್ರಮಗಳಿಗೂ ಮುಂಚೆ ಎಲಿ ಪ್ಯಾಡ್ ಬಳಿ ಮಾತನಾಡಿದ ಅವರು ಸುಮ್ನೆ ನಡಿರಪ್ಪ ಅಂತ ಪದೇ ಪದೆ ಡೈಲಾಗ್ ನನ್ನು ರಿಪಿಟ್ ಮಾಡುತ್ತಾ, ಹಲವು ವಿಚಾಗಳನ್ನು ಹೇಳಿದ್ದು ಏನಪ್ಪ ಅಂದ್ರೆ.

ಕಾಂಗ್ರೆಸ್ ಮೃದು ಹಿಂದುತ್ವ ಪಾಲಿಸುತ್ತಿಲ್ಲ ನಾನು ಹಿಂದು, ಜಾತ್ಯಾತೀತ ಬದ್ಧತೆ ನನಗೆ ಇದೆ ಎಂದರು. ಅನಂತಕುಮಾರ್ ಹೆಗಡೆ ಬಗ್ಗೆ ಮಾತನಾಡುತ್ತಾ  ಅವನೊಬ್ಬ ಯಕಶ್ಚಿತ್ ರಾಜಕಾರಣಿ.

RSS ಕಂಡರೆ ನಮಗೆ ಭಯ ಇಲ್ಲ. RSS ಕಿಡಿ ಹಚ್ಚುತ್ತದೆ ಎಚ್ಚರವಿರಿ ಎಂದು ಕಾರ್ಯಕರ್ತರಿಗೆ ಹೇಳಿದ್ದೇನೆ ಎಂದರು.

ಪ್ರಗತಿಪರರ ವಿರುದ್ಧ  ಹೆಗಡೆ ಹೇಳಿಕೆ ವಿಚಾರ ಕ್ಕೆ ಸಂಬಂಧಿಸಿದಂತೆ ಪ್ರಗತಿಪರರು ಅಂದರೆ ಯಾರೆಂದು ಪ್ರಶ್ನಿಸಿದರು. ಏನು ಮಾಡಬೇಕು ತಿಳಿಸಿ ಎಂದು ಮತ್ತೆ  ಪತ್ರಕರ್ತರಿಗೆ ಮರುಪ್ರಶ್ನೆ ಹಾಕಿದರು.