ಬೆಂಗಳೂರು: ಗ್ರಾಹಕರಿಗೆ ಗುಡ್ ನ್ಯೂಸ್ ನೀಡಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI), ಡೆಬಿಟ್ ಕಾರ್ಡ್‌ಗಳ ದೈನಂದಿನ ವಿತ್ ಡ್ರಾ ಮಿತಿಯನ್ನು 10,000 ರೂ.ಗಳಿಂದ 1 ಲಕ್ಷ ರೂ.ಗೆ ಹೆಚ್ಚಿಸಿದೆ.

7 ರೀತಿಯ ಕಾರ್ಡ್‌ಗಳಲ್ಲಿ ವಿವಿಧ ವಿತ್ ಡ್ರಾ ಮಿತಿಗಳನ್ನು 20,000 ರೂ. ಯಿಂದ 1 ಲಕ್ಷ ರೂ.ವರೆಗೆ ಹೆಚ್ಚಿಸಲಾಗಿದೆ ಎಂದು ಪ್ರಕಟಿಸಿದೆ.

ಇನ್ನು ನೀವೇನಾದರೂ 10,000 ರೂ.ಗಿಂತ ಹೆಚ್ಚಿನ ಹಣವನ್ನು ಹಿಂಪಡೆಯಲು ಬಯಸಿದರೆ, ಪಿನ್ ಜೊತೆಗೆ ಮೊಬೈಲ್ ಸಂಖ್ಯೆಗೆ ಬರುವ ಒಟಿಪಿಯನ್ನು ಕೂಡಾ ನಮೂದಿಸಬೇಕಾಗುತ್ತದೆ.