ಬೆಂಗಳೂರು: ಒಂದು ಕೊಠಡಿಯಲ್ಲಿ 18 ಜನ ವಿದ್ಯಾರ್ಥಿಗಳಿಗೆ ಮಾತ್ರ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡುತ್ತೇವೆ ಎಂದು ಶಿಕ್ಷಣ ಸಚಿವ ಎಸ್​ ಸುರೇಶ್ ಕುಮಾರ್ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಂಟೂವರೆ ಲಕ್ಷ ಎಸ್‌ಎಸ್‌ಎಲ್​ಸಿ ಮಕ್ಕಳಿಗೂ ಮಾಸ್ಕ್ ನೀಡಲಾಗುವುದು. ಎಲ್ಲ ಪರೀಕ್ಷಾ ಕೇಂದ್ರಗಳ ಬಳಿ ಆರೋಗ್ಯ ಇಲಾಖೆ ಸಿಬ್ಬಂದಿ ಪರೀಕ್ಷೆಗೆ ಬರುವವರ ಆರೋಗ್ಯ ಪರೀಕ್ಷೆ ಮಾಡಲಿದ್ದಾರೆ.  ಎಲ್ಲಾ ಕೊಠಡಿ ಸ್ಯಾನಿಟೈಸ್ಡ್ ಮಾಡುತ್ತೇವೆ ಎಂದು ಹೇಳಿದ್ದಾರೆ.