ಬೆಂಗಳೂರು: ಎಸ್.ಎಸ್.ಎಲ್.ಸಿ- ದ್ವಿತೀಯ ಪಿಯುಸಿ ಫಲಿತಾಂಶದ ಬಗ್ಗೆ ಶಿಕ್ಷಣ ಸಚಿವ ತನ್ವೀರ್ ಸೇಠ್ ಮಾತನಾಡಿ  ಮುಂದಿನ ತಿಂಗಳು ಮೇ 7ರಂದು ಎಸ್ ಎಸ್ ಎಲ್ ಸಿ ಹಾಗೂ  ಎಪ್ರಿಲ್ ಕೊನೆ ವಾರ ಪಿಯುಸಿ ಫಲಿತಾಂಶ ನೀಡಲಾಗುವುದು ಪ್ರಕಟಿಸಲಾಗುತ್ತದೆ ಎಂದು ಹೇಳಿದ್ದಾರೆ..

ಅವರು ಕಚೇರಿ ಯಲ್ಲಿ ನಡೆದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಇಂದು ಎಸ್ ಎಸ್ ಎಲ್ ಸಿ ಪರೀಕ್ಷೆಯು ಯಶಸ್ವಿಯಾಗಿ ಮುಗಿದಿರುವುದು ಎಲ್ಲರ ಸಮಾಧಾನಕ್ಕೆ ಕಾರಣವಾಗಿದೆ ಅಂತ ಸಂತೋಷ ವ್ಯಕ್ತಪಡಿಸಿದಲ್ಲದೆ, ಪರೀಕ್ಷಾ ಸುಧಾರಣಾ ಕ್ರಮ ತೃಪ್ತಿ ತಂದಿದೆ ಮಕ್ಕಳಿಗೆ ಪರೀಕ್ಷಾ ಭಯದಿಂದ ಮುಕ್ತಗೊಳಿಸಲಾಗಿದೆ ಅಂತ ಹೇಳಿದರು.