ಚಿತ್ರದುರ್ಗ: ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಎಸ್ ಆರ್ ಎಸ್ ಹೆರಿಟೇಜ್ ಶಾಲೆಯಲ್ಲಿ ದಿನಾಂಕ  ಕನ್ನಡ ರಾಜ್ಯೋತ್ಸವ ಹಾಗೂ ಮಕ್ಕಳ ದಿನಾಚರಣೆಯ ಅಂಗವಾಗಿ ಶಾಲೆಯಲ್ಲಿ ಸಾಂಸ್ಕೃತಿಕ ರಸ ಸಂಜೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

ಈ ಸಮಾರಂಭದ ಅಧ್ಯಕ್ಷತೆಯನ್ನು ಎಸ್ ಆರ್ ಎಸ್ ಸಮೂಹ ಸಂಸ್ಥೆಯ ಅಧ್ಯಕ್ಷರಾದ ಬಿ.ಎ ಲಿಂಗಾರೆಡ್ಡಿಯವರು ವಹಿಸಿದ್ದರು. ಶ್ರೀ ಲಕ್ಷ್ಮಣ್ ನಿಂಬರಗಿ ಐ.ಪಿ.ಎಸ್ ಉಪ ಅಧೀಕ್ಷಕರು, ಜಿಲ್ಲಾ ಪೋಲಿಸ್, ಚಿತ್ರದುರ್ಗ ಇವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ಹಾಗೂ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶ್ರೀ ಎಂ ರೇವಣಸಿದ್ದಪ್ಪ. ಡಿ.ಡಿ.ಪಿ.ಐ. ಚಿತ್ರದುರ್ಗ, ರವರು ವಹಿಸಿದ್ದರು, ನಂತರ ಕಾರ್ಯಕ್ರವನ್ನು ಕುರಿತು ಮಾತನಾಡಿದ ಅತಿಥಿಗಳು ಮಕ್ಕಳ ಪ್ರತಿಭೆಯನ್ನು ಗುರುತಿಸಿ ಮಕ್ಕಳಿಗೆ ಬೌತಿಕ, ನೈತಿಕ ಸಾಮಾಜಿಕ, ಶಿಕ್ಷಣ ನೀಡಬೇಕು ಅಂತಹ ಕೆಲಸವನ್ನು ಎಸ್ ಆರ್ ಎಸ್ ಶಿಕ್ಷಣ ಸಂಸ್ಥೆಯು ನೀಡುತ್ತಿದೆ ಎಂದು ನಾನು ಹೇಳುತ್ತಿಲ್ಲ ಚಿತ್ರದುರ್ಗದ ಜನತೆ ಹೇಳುತ್ತಿದ್ದಾರೆ ಎಂದು ಶಿಕ್ಷಣ ಹಾಗೂ ಶಿಕ್ಷಕರ ಬಗ್ಗೆ ಸವಿವರವಾಗಿ ಹೇಳುತ್ತಾ ಶಾಲೆಯಲ್ಲಿ ಚಟುವಟಿಕೆ ಆಧರಿತ ಶಿಕ್ಷಣವನ್ನು ನೀಡಿದಾಗ ಮಗುವಿನ ಸರ್ವತೋಮುಖ ಬೆಳವಣಿಗೆಗೆ ಸಹಾಯವಾಗುತ್ತದೆ ಈ ಕೆಲಸವನ್ನು ಎಸ್ ಆರ್ ಎಸ್ ಶಿಕ್ಷಣ ಸಂಸ್ಥೆಯು ಮಕ್ಕಳಿಗೆ ಸುಸಜ್ಜಿತ ಶಾಲಾ ಕಟ್ಟಡ ಪಿಠೋಪಕರಣಗಳು, ಅನುಭವಿ ಸಿಬ್ಬಂದಿ ವರ್ಗಗಳನ್ನು ನೀಡುತ್ತಿದೆ.

ಚಿತ್ರದುರ್ಗದಲ್ಲೆ ಪ್ರತಿಷ್ಟಿತ ಶಿಕ್ಷಣ ಸಂಸ್ಥೆ ಎಂದರೆ ಎಸ್ ಆರ್ ಎಸ್ ಎಂದು ಶಿಕ್ಷಣ ಸಂಸ್ಥೆಯನ್ನು ಕುರಿತು ನೆರೆದ ಸಮಸ್ತ ನಾಗರಿಕರಿಗೆ ತಿಳಿಸಿದರು, ಹಾಗೂ ಕನ್ನಡದ ಬಗ್ಗೆ ಮಾತನಾಡಿ ಎಲ್ಲಾ ಆಂಗ್ಲ ಮಾದ್ಯಮ ಶಾಲೆಯಲ್ಲಿ ಕನ್ನಡ ಕಡ್ಡಾಯವಾಗಿ ಬೋಧನೆ ಮಾಡಬೇಕು ಎಂದು ಕನ್ನಡವನ್ನು ಮೈಗೂಡಿಸಿಕೊಂಡು ಬೆಳೆಯಬೇಕು ಎಂದು ನಾಡು ನುಡಿಯ ಸಂಸ್ಕೃತಿಯನ್ನು ಹಾಗೂ ಅದರ ಮಹತ್ವವನ್ನು ತಮ್ಮ ವಿವೇಕವಾಣಿಯಿಂದ ಮೈಗೂಡಿಸಿಕೊಂಡು ಸಾಗಬೇಕು ಎಂದು ಸಲಹೆ ನೀಡಿದರು. ಅಧ್ಯಕ್ಷರಾದ ಬಿ.ಎ ಲಿಂಗಾರೆಡ್ಡಿಯವರು ಮಾತನಾಡಿ ನಮ್ಮ ಸಂಸ್ಥೆ ಏಳಿಗೆಗೆ ಪೋಷಕರು ಸಹಕಾರ ನೀಡುತ್ತಾ ಇರುವುದು ಶ್ಲಾಘನೀಯ, ನಮ್ಮ ಸಂಸ್ಥೆಯ ಬೋಧಕ ಸಿಬ್ಬಂದಿ ಮಕ್ಕಳ ಸರ್ವತೋಮುಖ ಅಭಿವೃದ್ಧಿಯ ಕಡೆಗೆ ಒತ್ತುನೀಡಿ ಶ್ರಮಿಸುತ್ತಿದ್ದಾರೆಂದು ಹೇಳಲು ಸಂತೋಷವಾಗುತ್ತದೆ, ಹಾಗೂ ಕಾರ್ಯಕ್ರವನ್ನು ಕುರಿತು ಪ್ರಾಂಶುಪಾಲರಾದ ಪ್ರಭಾಕರ್ ಎಂ ಎಸ್ ಅವರು ಮಾತನಾಡಿ ಶಾಲೆಯಲ್ಲಿ ನಡೆದ ಸಹಪಠ್ಯೇತರ ಚಟುವಟಿಕೆಯ ಮಾಹಿತಿಯನ್ನು ಸಮಸ್ತರಿಗೂ ತಿಳಿಸಿದರು. ನಂತರ ಶಾಲೆಯ ಮಕ್ಕಳು ಜಾನಪದಸೊಗಡಿನ ವಿವಿಧ ರೀತಿಯ ನೃತ್ಯಗಳನ್ನು ಮಾಡಿ ನೆರೆದ ಜನರ ಮನಸೂರೆಗೊಂಡು ಪ್ರೇಕಕ್ಷರಿಗೆ ರಸದೌತಣ ಉಣಬಡಿಸಿದರು.

ಎಲ್ಲಾ ವಿಭಾಗದ ಪ್ರಾಂಶುಪಾಲರು ಆಡಳಿತಾಧಿಕಾರಿಗಳು, ಯುವ ತರಂಗದ ಸಂಚಾಲಕರು ಹಾಜರಿದ್ದರು.