ಬೆಂಗಳೂರು: ಮಂಡ್ಯದ ಲೋಕಸಭಾ ಅಭ್ಯರ್ಥಿ ಸುಮಲತಾ ಅಂಬರೀಶ್ ಇಂದು ಬಿಜೆಪಿ ನಾಯಕ ಎಸ್.ಎಮ್. ಕೃಷ್ಣ ಅವರನ್ನು ಭೇಟಿಯಾಗಿದರು.

ಭೇಟಿ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಎಸ್.ಎಮ್. ಕೃಷ್ಣ, ಕಳೆದ  ಉಪಚುನಾವಣೆಯಲ್ಲಿ ಬಿಜೆಪಿ ಉತ್ತಮ ಮತ ಪಡೆದಿತ್ತು. ಈಗ ಸುಮಲತಾ ಅವರು ಆ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದು, ಈ ಬಗ್ಗೆ ಪಕ್ಷದ ವರಿಷ್ಠರಲ್ಲಿ ಮಾತನಾಡುತ್ತೇನೆ. ಆ ಬಳಿಕ ಮಂಡ್ಯದಿಂದ ಬಿಜೆಪಿ ಅಭ್ಯರ್ಥಿಯನ್ನು ನಿಲ್ಲಿಸಬೇಕೋ ಅಥವಾ ಸುಮಲತಾರನ್ನು ಬೆಂಬಲಿಸಬೇಕೋ ಎನ್ನುವುದು ತೀರ್ಮಾನವಾಗುತ್ತದೆ ಎಂದರು.