ಬೆಂಗಳೂರು: ಲಾಕ್ ಡೌನ್ ಪರಿಣಾಮ ಸ್ಥಗಿತಗೊಂಡಿರುವ ರಾಜ್ಯದ 10ನೇ ತರಗತಿ ಮಕ್ಕಳ ಪರೀಕ್ಷೆ ಬಗ್ಗೆ ಸಚಿವ ಎಸ್.ಸುರೇಶ್ ಕುಮಾರ್ ಅವರು ಇಂದು ಎಲ್ಲಾ ಜಿಲ್ಲೆಗಳ ಶೈಕ್ಷಣಿಕ ಉಪ ನಿರ್ದೇಶಕರುಗಳೊಂದಿಗೆ ಚರ್ಚೆ ನಡೆಸಿದರು.

ಈ ವೇಳೆ, ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು. ಈ ಹಿಂದೆ ಪರೀಕ್ಷೆ ಸಂಬಂಧ ಮಾತನಾಡಿದ್ದ ಸಚಿವರು, ಪರೀಕ್ಷೆಗೂ ಮುನ್ನ ಒಂದು ವಾರ ಶಾಲೆ ನಡೆಸಿ, ಪರೀಕ್ಷೆ ಎದುರಿಸುವ ಬಗ್ಗೆ ಮಕ್ಕಳಲ್ಲಿ ನೈತಿಕ ಸ್ಥೈರ್ಯ ತುಂಬಲಿದ್ದೇವೆ ಎಂದಿದ್ದರು.

ಹಾಗೇ  ಎಲ್ಲಾ ಜಿಲ್ಲೆಗಳ ಶೈಕ್ಷಣಿಕ ಉಪ ನಿರ್ದೇಶಕರುಗಳೊಂದಿಗೆ ವಿಡಿಯೊ ಸಂವಾದ ನಡೆಸಿದ ಸಚಿವರು, ಮಕ್ಕಳು ಪರೀಕ್ಷೆಗೆ ಹಾಜರಾಗುವ ಮುನ್ನ ಸ್ಕ್ರೀನಿಂಗ್ ಟೆಸ್ಟ್ ಗೆ ಒಳಪಡಿಸಿ. ಬಳಿಕ ಪರೀಕ್ಷಾ ಕೊಠಡಿ ಪ್ರವೇಶಿಸುವ ಮೊದಲು ಮಾಸ್ಕ್ ಹಾಗೂ ಸ್ಯಾನಿಟೈಸರ್ ಒದಗಿಸಿ. ಯಾರೊಬ್ಬರೂ ನೆಲದ ಮೇಲೆ ಕುಳಿತು, ಬಯಲಿನಲ್ಲಿ ಪರೀಕ್ಷೆ ಬರೆಯದಂತೆ ಎಚ್ಚರವಹಿಸಿ. ಕಂಟೇನ್ಮೆಂಟ್ ಪ್ರದೇಶಗಳಲ್ಲಿನ ಪರೀಕ್ಷಾ ಕೇಂದ್ರವನ್ನು ಬೇರೆಡೆಗೆ ಸ್ಥಳಾಂತರಿಸಿ ಎಂದು ಸೂಚನೆ ನೀಡಿದ್ದಾರೆ.!