ಬೆಂಗಳೂರು : ಲಾಕ್ ಡೌನ್ ನಂತ್ರ ದಿಢೀರ್ ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು ವಿದ್ಯಾರ್ಥಿಗಳಿಗೆ ಘೋಷಣೆ ಮಾಡುವುದಿಲ್ಲ. ಏಪ್ರಿಲ್ 14ರ ನಂತ್ರ ಹೊಸ ಪರೀಕ್ಷಾ ವೇಳಾಪಟ್ಟಿಯನ್ನು ಪ್ರಕಟಿಸಲಾಗುತ್ತದೆ ಎಂದು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು ಅದಕ್ಕೂ ಮೊದಲು ಒಂದು ವಾರಗಳ ಕಾಲ, ವಿದ್ಯಾರ್ಥಿಗಳಿಗೆ ಧೈರ್ಯ ತುಂಬುವಂತ ಕೆಲಸವನ್ನು ತರಗತಿ ಆರಂಭಿಸುವ ಮೂಲಕ ಮಾಡಲಾಗುತ್ತದೆ. ಲಾಕ್ ಡೌನ್ ಮುಗಿದ ಬಳಿಕ ಎಸ್‌ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ವೇಳಾಪಟ್ಟಿ ಪ್ರಕಟಿಸಲಾಗುತ್ತದೆ. ಬಳಿಕ 1 ವಾರ ತರಗತಿಗಳನ್ನು ಆರಂಭಿಸಲಾಗುವುದು. ರಜೆ ಇರುವುದರಿಂದ ವಿದ್ಯಾರ್ಥಿಗಳಿಗೆ ಚೇತನ ತುಂಬಬೇಕು. ಪರೀಕ್ಷೆ ಎದುರಿಸಲು ಉತ್ಸಾಹ ತುಂಬುವ ಕೆಲಸ ಮಾಡಬೇಕು ಹೀಗಾಗಿ 1 ವಾರ ತರಗತಿ ನಡೆಸಲಾಗುವುದು ಎಂದು ಹೇಳಿದ್ದಾರೆ.