ಬೆಂಗಳೂರು : ಯಾವುದಾದರೂ ಶಾಲೆ ಅಥವಾ ಕಾಲೇಜಿನ ಎಸ್‌ಎಸ್‌ಎಲ್ ಸಿ ಮತ್ತು ದ್ವಿತೀಯ ಪಿಯುಸಿ ಫಲಿತಾಂಶ ಐದು ವರ್ಷಗಳ ಜಿಲ್ಲಾ ಸರಾಸರಿಗಿಂತ ಕಡಿಮೆ ಇದ್ದರೆ ಅವುಗಳ ಜೂನ್ ತಿಂಗಳ ವೇತನಾನುದಾನ ತಡೆಹಿಡಿಯಬೇಕು ಎಂದು ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಎಲ್ಲ ಉಪ ನಿರ್ದೇಶಕರಿಗೆ ನಿರ್ದೇಶನ ನೀಡಿದ್ದಾರಂತೆ

ಜುಲೈ ನಲ್ಲಿ ಶೇ. 30 ರಷ್ಟು ವೇತನ ಹೆಚ್ಚಳ ಖುಷಿಯಲ್ಲಿ ಸರ್ಕಾರಿ ನೌಕರರಿದ್ದರೆ, ಖಾಸಗಿ, ಅನುದಾನಿತ ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳ ಶಿಕ್ಷಕರು ಮತ್ತು ಉಪನ್ಯಾಸಕರಿಗೆ ಜೂನ್ ತಿಂಗಳ ವೇತನವೇ ಸ್ಥಗಿತಗೊಳ್ಳುವ ಆತಂಕ ಎದುರಾಗಿದೆ.

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎನ್. ಮಹೇಶ್ ಅಧ್ಯಕ್ಷತೆಯಲ್ಲಿ ನಡೆದ ಮೇಲ್ಮನೆ ಸದಸ್ಯರ ಸಭೆಯಲ್ಲಿ ವೇತನಾನುದಾನ ನಿಲ್ಲಿಸುವುದು ಸರಿಯಲ್ಲ, ಬದಲಿಗೆ ನೋಟಿಸ್ ನೀಡಿ ಅಥವಾ ಅಗತ್ಯ ಬಿದ್ದಲ್ಲಿ ಭತ್ಯೆ ತಡೆಹಿಡಿಯಲು ಸೂಚಿಸಲಾಗಿದೆಯಂತೆ ಹಾಗಾಗಿ ಫಲಿತಾಂಶ ಕಡಿಮೆ ಬಂದ ಶಾಲಾ ಶಿಕ್ಷಕರ ವೇತನಾನುದಾನ ಕಡಿವಾಣಕ್ಕ ಮುಂದಾಗಿರುವುದು ಸುದ್ದಿ.