ಬೆಂಗಳೂರು: ಎಲ್ಲ ಬ್ಯಾಂಕ್ ಶಾಖೆಗಳು ಕಾರ್ಯನಿರ್ವಹಿಸಲಿವೆ. ನಗದು ಠೇವಣಿ, ಮತ್ತುಹಣ ಹಿಂಪಡೆಯುವುದು, ಚೆಕ್ ಕ್ಲಿಯರೆನ್ಸ್, ರವಾನೆ ಸೇವೆ, ಸರ್ಕಾರದ ವಹಿವಾಟು, ಎಟಿಎಂ ಸೇವೆ ಸೇರಿ ಅಗತ್ಯ ಬ್ಯಾಂಕಿಂಗ್ ಸೇವೆ ಇಂದಿನಿಂದ ಲಭ್ಯವಿರುತ್ತವೆ.

ವೇತನ ಮತ್ತು ಪಿಂಚಣಿ ಪಾವತಿಯಿಂದಾಗಿ ಬ್ಯಾಂಕ್ ಗಳ ಮೇಲೆ ಒತ್ತಡ ಹೆಚ್ಚಾಗುವ ಸಾಧ್ಯತೆ ಇದೆ. ಹಾಗಾಗಿ ಸರ್ಕಾರದ ಸಲಹೆ ಮೇರೆಗೆ ಇಂದಿನಿಂದ ಬೆಳಿಗ್ಗೆ 10 ರಿಂದ 2 ಗಂಟೆವರೆಗೆ ದೇಶಾದ್ಯಂತ ಎಲ್ಲ ಬ್ಯಾಂಕ್ ಶಾಖೆಗಳು ಕಾರ್ಯನಿರ್ವಹಿಸುವಂತೆ ಹಣಕಾಸು ಇಲಾಖೆ ಸೂಚಿಸಿದೆ.!