ಬೆಂಗಳೂರು: ಎರಡೇ ತಿಂಗಳಲ್ಲಿ ಜೆಡಿಎಸ್ ಮತ್ತೆ ಅಧಿಕಾರಕ್ಕೆ
ಎರಡೇ ತಿಂಗಳಲ್ಲಿ ಜೆಡಿಎಸ್ ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರಿಂದು ಭವಿಷ್ಯ ನುಡಿದಿದ್ದಾರೆ.!
ವಿಧಾನ ಪರಿಷತ್ ಸದಸ್ಯರನ್ನು ತಮ್ಮ ನಿವಾಸಕ್ಕೆ ಕರೆದು ಮಾತನಾಡಿದ ಗೌಡರು, ಈ ಮೂಲಕ ಸದಸ್ಯರ ಭಿನ್ನಮತ ಶಮನಗೊಳಿಸಲು ಯತ್ನಿಸಿದ್ದಾರೆ. ನಿಮಗಾದ ನೋವು ನನಗೆ ಅರ್ಥವಾಗಿದೆ. ನಮ್ಮಿಂದ ತಪ್ಪಾಗಿದೆ, ಆ ತಪ್ಪನ್ನು ತಿದ್ದಿಕೊಳ್ಳಲು ಸಿದ್ಧರಿದ್ದೇವೆ. ಉಸ್ತುವಾರಿ ಸಭೆಯಲ್ಲಿ ಭಿನ್ನಮತ ಶಮನ ಮಾಡುವುದಾಗಿ ಗೌಡರು ಭರವಸೆ ನೀಡಿದ್ದಾರೆ.