ಬೆಂಗಳೂರು: ಅ.13ರ ಎರಡನೇ ಶನಿವಾರ ರಜೆ ಇರುವುದನ್ನು ರದ್ದುಪಡಿಸಿ ಅ.20ರಂದು ರಜೆ ನೀಡಲು ಸರ್ಕಾರ ಚಿಂತನೆ ನಡೆಸಿದೆ ಎಂಬ ಸುದ್ದಿಗೆ ಸರಕಾರ ಸ್ಪಷ್ಟನೆ ನೀಡಿದ್ದು  ಎರಡನೇ ಶನಿವಾರದ ರಜೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಹೇಳಿದೆ.

ದಸರಾ ಪ್ರಯುಕ್ತ ಗುರುವಾರ, ಶುಕ್ರವಾರ ಸರ್ಕಾರಿ ರಜೆ ಇದ್ದು, ಅ.20ರ ಮೂರನೇ ಶನಿವಾರದಂದು ಸರ್ಕಾರಿ ಸಿಬ್ಬಂದಿ ರಜೆ ಹಾಕಲಿದ್ದಾರೆ.  ಹೀಗಾಗಿ ಎರಡನೇ ಶನಿವಾರ ಬದಲಿಗೆ ಮೂರನೇ ಶನಿವಾರ ರಜೆ ನೀಡಲಾಗುತ್ತದೆ ಎಂದು ಹೇಳಲಾಗಿತ್ತು. ಆದರೆ, ಇದಕ್ಕೆ ಸ್ಪಷ್ಟನೆ ನೀಡಿರುವ ಸರ್ಕಾರ, ಎರಡನೇ ಶನಿವಾರದ ರಜೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಹೇಳಿದೆ.!