ಬೆಂಗಳೂರು: ಇನ್ನುಮುಂದೆ ಎಟಿಎಂಗೆ ಹೋಗಿ ಕಾರ್ಡ್  ಹಾಕುವ ಬದಲು ಬಯೋಮೇಟ್ರಿಕ್ ಬರುತ್ತೆ ಎಂಬುದು ಹೊಸ ಸುದ್ದಿ. ಭಾರತದ ಅತಿದೊಡ್ಡ ಮೊಬೈಲ್ ಫೋನ್ ಆಧಾರಿತ ಪಾವತಿ ಕಂಪೆನಿಗಳಲ್ಲಿ ಒಂದಾದ ಮನಿಆನ್ ಮೊಬೈಲ್ ಇಂಕ್ ಕಂಪೆನಿ ಹೊಸ ಬಯೋಮೆಟ್ರಿಕ್ ಆಧಾರಿತ ಎಟಿಎಂ ನಗದು ಔಟ್‌ಲೇಟ್ ಅನ್ನು ಪ್ರಾರಂಭಿಸಿಲಾಗುತ್ತದೆ.

ಮೊಬೈಲ್ ಫೋನ್ ಮೂಲಕ ಪಾವತಿ ಸೇವೆಯನ್ನು ನೀಡುತ್ತಿರುವ ಮನಿಆನ್ ಇದೀಗ ಬಯೋಮೆಟ್ರಿಕ್ ಯೋಜನೆಗೆ ಮುಂದಾಗಿದೆ.

ಮನಿಆನ್ ಮೊಬೈಲ್ ಇಂಕ್ ಕಂಪೆನಿ ಸ್ಥಾಪಿಸಿರುವ ಈ ಬಯೋಮೆಟ್ರಿಕ್ ಆಧಾರಿತ ಎಟಿಎಂ, ಗ್ರಾಹಕರಿಗೆ ತಮ್ಮ ಬ್ಯಾಂಕ್ ಖಾತೆಯಿಂದ ಯಾವುದೇ ದಾಖಲೆಯನ್ನು ಒದಗಿಸದೆ ಹಣವನ್ನು ಹಿಂಪಡೆಯಲು ಅನುವು ಮಾಡಿಕೊಡುತ್ತದೆ. ಹಾಗಾಗಿ, ಇನ್ಮುಂದೆ ಮುಂದೆ ಬಳಕೆದಾರರು ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಬಳಕೆ ಮಾಡದೇ ಎಟಿಎಂನಲ್ಲಿ ಹಣ ಡ್ರಾ ಮಾಡಬಹುದಾಗಿದೆ.

ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಬಳಕೆ ಮಾಡದೇ ಕೇವಲ ಬಯೊ ಮೆಟ್ರಿಕ್ (ಬೆರಳಚ್ಚು) ಮೂಲಕ ಇನ್ನು ಎಟಿಎಂಗಳಲ್ಲಿ ಹಣ ಪಡೆಯಬಹುದಾಗಿದೆ. ಇದಕ್ಕೆ ಬಳಕೆದಾರರು ಆಧಾರ್ ಕಾರ್ಡ್‌ಅನ್ನು ಕಡ್ಡಾಯವಾಗಿ ಹೊಂದಿರಬೇಕಿದ್ದು, ಬ್ಯಾಂಕ್‌ನಲ್ಲಿ ಆಧಾರ್ ಅನ್ನು ನೀಡಿ ರಿಜಿಸ್ಟರ್ ಆಗಿರುವ ಎಲ್ಲಾ ಬಳಕೆದಾರರು ಎಟಿಎಂನಲ್ಲಿ ಬಯೊ ಮೆಟ್ರಿಕ್ (ಬೆರಳಚ್ಚು) ಮೂಲಕ ಹಣ ಪಡೆಯಬಹುದಾಗಿದೆ ಎಂಬುದು ನ್ಯೂ ಸುದ್ದಿ.