ಗದಗ : ಶಾಸಕ ಎಚ್ ಕೆ ಪಾಟೀಲ್ ಗೆ ಸಚಿವ ಸ್ಥಾನ ಕೈ ತಪ್ಪಿದ ಹಿನ್ನಲೆಯಲ್ಲಿ ಅವರಿಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ ಗದಗ ನಗರಸಭೆಯಲ್ಲಿ ಚುನಾಯಿತರಾಗಿರುವ 28 ಕಾಂಗ್ರೆಸ್ ಸದಸ್ಯರು ರಾಜೀನಾಮೆ ನೀಡಿದ್ದಾರೆ.

ನಗರಸಭೆ ಅಧ್ಯಕ್ಷ ಬಿ ಬಿ ಅಸುಟಿ ಸೇರಿದಂತೆ 28 ಸದಸ್ಯರು ರಾಜೀನಾಮೆ ನೀಡಿದ್ದು, ಈ ಪೈಕಿ 23 ಜನ ಚುನಾಯಿತ ಸದಸ್ಯರು ಹಾಗೂ 5 ಜನ ನಾಮ ನಿರ್ದೇಶನ ಸದಸ್ಯರು ರಾಜೀನಾಮೆ ಸಲ್ಲಿಸಿದ್ದಾರೆ.

ಇದೇ ವೇಳೆ ಡಾ.ಜಿ ಪರಮೇಶ್ವರ್ ರಿಗೆ ಪತ್ರ ಬರೆದಿದ್ದು, ಪತ್ರದಲ್ಲಿ ಎಚ್ಕೆ ಪಾಟೀಲ್ ‌ಹಿರಿಯರು, ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ, ಸಚಿವ ಸ್ಥಾನ ನೀಡದಕ್ಕೆ ನೋವಾಗಿದೆ ಹೀಗಾಗಿ ಸಾಮೂಹಿಕ ರಾಜೀನಾಮೆ ನೀಡಿದ್ದೇವೆ ಅಂತ ಹೇಳಿದ್ದಾರೆ.

ಆದ್ರೆ ಸೋಮವಾರ ಇನ್ನೂ ಯಾವರೀತಿಯ ತೀರುವು ಪಡೆದುಕೊಳ್ಳುತ್ತದು ಕಾದುನೋಡಬೇಕು.