ಚಿತ್ರದುರ್ಗ:  ದಾಖಲೆ ಇಲ್ಲದೆ 4 ಲಕ್ಷ 60 ಸಾವಿರ  ಹಣ ವಶ ಪಡಿಸಿಕೊಂಡ ಘಟನೆ ಚಳ್ಳಕೆರೆ ಚಕ್ ಪೋಸ್ಟ್ ನಲ್ಲಿ ಪತ್ತೆ ಆಗಿದೆ.   ಸೊಲ್ಲಾಪುರದ ಪರಮಾನಂದ ಎಂಬುವರ ಕಾರಿನಲ್ಲಿ ಈ ಹಣಪತ್ತೆ ಸಿಕ್ಕಿದೆ.

ಪರಮಾನಂದ, ಮಹಾರಾಷ್ಟ್ರ ಮೂಲದ ಗುತ್ತಿಗೆದಾರ ಎಂದು ತಿಳಿದು ಬಂದಿದೆ. ಚಳ್ಳಕೆರೆ ಚಕ್ ಪೋಸ್ಟ್ ಬಳಿ ಕಾರನ್ನು ತಡೆದು ಎಂ.ಸಿ.ಸಿ ನೋಡಲ್ ಅಧಿಕಾರಿಗಳು ತಪಾಸಣೆ ನಡೆಸಿದಾಗ  ದಾಖಲೆ ಇಲ್ಲದ ಹಣ ಸಿಕ್ಕಿದ್ದು ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಈ ಘಟನೆಯು ನಿನ್ನೆ ನಡೆದಿದೆ. MCC ನೋಡಲ್ ಅಧಿಕಾರಿ ಮಂಜುನಾಥ ನೇತೃತ್ವದಲ್ಲಿ ಈ ದಾಳಿ ನಡೆಸಲಾಗಿದೆ.