ಬೆಂಗಳೂರು: ಕೊನೆಯ ಕ್ಷಣದಲ್ಲಿ ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಎಂ.ಬಿ.ಪಾಟೀಲರ ಸದಾಶಿವ ನಗರದ ಮನೆಯಲ್ಲಿ ಅತೃಪ್ತಿ ಕೈ ಶಾಸಕರ ಸಭೆ ನಡೆಯುತ್ತಿದೆ.
ಯಾವಾಗ ಸಚಿವ ಸಂಪುದ ಪ್ರಮಾಣ ವಚನ ಕಾರ್ಯಕ್ರಮ ಆದ ಬಳಿಕ ಮಂತ್ರಿ ಪಟ್ಟ ಕೈ ತಪ್ಪಿದ ಶಾಸಕರು ರಾತ್ರಿ ಬೆಂಗಳೂರಿನ ಖಾಸಗಿ ಹೊಟೇಲ್ ನಲ್ಲಿ ಅತೃಪ್ತರ ಸಭೆನಡಯಿತು.

ಬೆಳಿಗ್ಗೆ ಪಾಟೀಲರು ಮಾಜಿ ಮುಖ್ಯ ಮಂತ್ರಿ ಮನೆಗೆ ಭೇಟಿ ನೀಡಿ ತಮ್ಮ ಗೆ ಸಿಗದ ಮಂತ್ರಿ ಪಟ್ಟದ ಬಗ್ಗೆ ಚರ್ಚೆ ನಡೆಸಿದರು. ಆನಂತರ ಇಂದು ಎಂ.ಬಿ.ಪಾಟೀಲರ ಮನೆಯಲ್ಲಿ ಅತೃಪ್ತ ಶಾಸಕರು ಸಭೆ  ನಡೆಸುತ್ತಿದ್ದಾರೆ. ಈ ಸಭೆಗೆ  ಸತೀಶ್ ಜಾರಕಿಹೊಳಿ ,
ಶಾಸಕರಾದ ಡಾ.ಸುಧಾಕರ್, ಎನ್.ಎ.ಹ್ಯಾರೀಸ್. ಈಶ್ವರ್ ಖಂಡ್ರೆ, ರಹೀಂ ಖಾನ್,ಎಂ.ಟಿ.ಬಿ ನಾಗರಾಜ್.  ಭೈರತಿ ಬಸವರಾಜು, ಸಿ.ಎಸ್.ಶಿವಳ್ಳಿ ಭಾಗಿಯಾಗಿದ್ದಾರೆ ಮುಂದಿನ ನಡೆಯ ಬಗ್ಗೆ ಸಭೆ ನಂತರ ಹೇಳುವ ಸಾಧ್ಯತೆ ಇದೆ.