ಬೆಂಗಳೂರು: ಸಿದ್ದರಾಮಯ್ಯರ ಪಾಳ್ಯದಲ್ಲಿ ಯಾರು ಗುರುತಿಸಿಕೊಂಡಿರುತ್ತಾರೋ ಅಂತವರಿಗೆ ಸಚಿವ ಸ್ಥಾನ ನೀಡಬಾರದು ಎಂದು ಕೆಲ ಕಾಂಗ್ರೆಸ್ ಮುಖಂಡರುಗಳು ಕಸರತ್ತು ನಡೆಸುತ್ತಿದ್ದಾರಂತೆ.

ಅದರಲ್ಲಿ ಎಂ.ಬಿ. ಪಾಟೀಲ್ರು ಒಬ್ಬರು. ಸಿದ್ದರಾಮಯ್ಯರ ಸರಕಾರದಲ್ಲಿ ಜಲಸಂಪನ್ಮೂಲ ಮಂತ್ರಿ ಆಗಿದ್ದರು. ಸಿದ್ದರಾಮಯ್ಯರ ಬಳಗದಲ್ಲಿ ಆಪ್ತರು ಆಗಿದ್ದರು. ದೋಸ್ತಿ ಸರಕಾರದಲ್ಲಿ ಎಂ.ಬಿ.ಪಾಟೀಲರಿಗೆ ಯಾವುದೇ ಖಾತೆ ಸಿಗಲಿಲ್ಲ. ಆದ್ರೆ ಕಾಂಗ್ರೆಸ್ ನಲ್ಲಿ ಉಳಿದಿರುವ 6 ಸ್ಥಾನಗಳಲ್ಲಿ ಎಂ.ಬಿ.ಪಾಟೀಲರಿಗೆ ನೀಡಬಾರದು, ಸಚಿವ ಸಂಪುಟದಿಂದ ಹೊರಗಿಡಲು ಕಾಂಗ್ರೆಸ್ ಪಡೆಯಲ್ಲೇ ತಂತ್ರ ರೂಪಿಸಲಾಗುತ್ತಿದೆ ಎಂಬ ಸುದ್ದಿ ಹರಿದಾಡುತ್ತಿದೆ.

ಇದರನಡುವೆ ಹೊಸ ಸುದ್ದಿ ಏನಪ್ಪ ಅಂದ್ರೆ ಎಂ.ಬಿ.ಪಾಟೀಲರ ಸಚಿವ ಸ್ಥಾನ ತಪ್ಪಿಸಿ ಲಕ್ಷ್ಮೀ ಹೆಬ್ಬಾಳ್ಕರ್ ಮಂತ್ರಿ ಸ್ಥಾನಕೊಡಿಸಲು ಮುಂದಾಗಿದ್ದಾರಂತೆ ಏಕೆಂದ್ರೆ ಎಂ.ಬಿ.ಪಾಟೀಲ್ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ಒಂದೆ ಸಮುದಾಯಕ್ಕೆ ಸೇರಿದವರು ಎಂಬ ಲೆಕ್ಕಾಚಾರವನ್ನು ಹಾಕಲಾಗಿದೆ.