ನವದೆಹಲಿ : ಎಂಜಿನಿಯರಿಂಗ್ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (AICTE) ಮಹತ್ವದ ಮಾಹಿತಿಯೊಂದನ್ನು ನೀಡಿದ್ದು, ಎಂಜಿನಿಯರಿಂಗ್ ಹಾಗೂ ಇತರ ತಾಂತ್ರಿಕ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳ ಪ್ರವೇಶಾತಿ ಗಡುವನ್ನು ಮತ್ತೆ ಒಂದು ತಿಂಗಳು ವಿಸ್ತರಿಸಿದೆ.

ಎಂಜಿನಿಯರಿಂಗ್ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ನವೆಂಬರ್ 20 ರವರೆಗೆ ಪ್ರವೇಶಾತಿ ಗಡುವನ್ನು ವಿಸ್ತರಿಸಿದ. ಹೀಗಾಗಿ ಮೊದಲ ಸೆಮಿಸ್ಟರ್ ತರಗತಿಗಳು ನವೆಂಬರ್ 1 ರ ಬದಲಾಗಿ, ಡಿಸೆಂಬರ್ 1 ರಿಂದ ಆರಂಭವಾಗಲಿದೆ ಎಂದು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ ತಿಳಿಸಿದೆ.

(ಸಾಂದರ್ಭಿಕ ಚಿತ್ರ)