ಬೆಂಗಳೂರ: ಉಪ ಚುನಾವಣೆಯಲ್ಲಿ ಬೆಂಗಳೂರಿನ ಶಿವಾಜಿನಗರ ಹಾಗೂ ಮಹಾಲಕ್ಷ್ಮಿ ಲೇಔಟ್ ಎರಡೂ ವಿಧಾನಸಭಾ ಕ್ಷೇತ್ರಗಳಿಂದ ಸ್ಪರ್ಧಿಸುವುದಾಗಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಹೇಳಿದ್ದಾರೆ.

ಪಕ್ಷಾಂತರಿಗಳಿಂದ ಪ್ರಜಾಪ್ರಭುತ್ವ ಹಾಳಾಗಿದ್ದು, ಇದೊಂದು ರೀತಿಯಲ್ಲಿ ದರೋಡೆಯಿದ್ದಂತೆ. ಉಪ ಚುನಾವಣೆಯಲ್ಲಿ ಅವರನ್ನು ಸೋಲಿಸಿ  ಎಂದು ಕರೆ ನೀಡಿದ್ದಾರೆ.