ಬೆಂಗಳೂರು : ಡಿಸೆಂಬರ್ 5 ರಂದು ಮತದಾನ ನಡೆಯಲಿರುವ ಉಪಚುನಾವಣೆಯಲ್ಲಿ  ರಾಜ್ಯದಲ್ಲಿ ಬಿಜೆಪಿ ಸರ್ಕಾರ ಮುಂದುವರೆಯಬೇಕಾದರೆ 15 ಕ್ಷೇತ್ರಗಳಲ್ಲಿ ಕನಿಷ್ಠ 6 ಕ್ಷೇತ್ರಗಳನ್ನು ಬಿಜೆಪಿ ಗೆಲ್ಲಬೇಕಿದೆ.

ಕರ್ನಾಟಕ ವಿಧಾನಸಭಾ ಬಲಾಬಲ 224 ಆಗಿದ್ದು, 17 ಮಂದಿ ಶಾಸಕರು ಅನರ್ಹಗೊಂಡ ಪರಿಣಾಮ 207 ಕ್ಕೆ ಕುಸಿದಿದೆ. ಬಹುಮತ ಸಾಧಿಸಲು 104 ಶಾಸಕರು ಬೆಂಬಲ ಬೇಕಿದ್ದ ಪರಿಣಾಮ ಬಿಜೆಪಿ 105 ಜನ ಶಾಸಕರ ಜೊತೆ ಓರ್ವ ಪಕ್ಷೇತರ ಶಾಸಕರ ಬೆಂಬಲ ಇದೆ. 15 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿರುವ ಪರಿಣಾಮ ವಿಧಾನಸಭೆಯ ಬಲಾಬಲ 221+1 ಏರಿಕೆ ಆಗಲಿದ್ದು, ಬಿಜೆಪಿ ಸರ್ಕಾರ ಉಳಿಸಿಕೊಳ್ಳಲು ಕನಿಷ್ಠ 6 ಕ್ಷೇತ್ರಗಳಲ್ಲಿ ಜಯಗಳಿಸಲೇಬೇಕಿದೆ.