ಚಿತ್ರದುರ್ಗ: ಒಬ್ಬರು ಜಿಲ್ಲಾಧಿಕಾರಿ ವಿವಿ. ಜ್ಯೋತ್ಸ್ನಾ ಆದರೆ ಮತ್ತೊಬ್ಬರು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್.

ಸೌಭಾಗ್ಯ ಬಸವರಾಜನ್ ಗ್ರಾಮ ಪಂಚಾಯಿತಿ ಯಿಂದ ಜಿಲ್ಲಾ ಪಂಚಾಯತ್ ಸದಸ್ಯರಾಗಿ ಮತ್ತು ಅಧ್ಯಕ್ಷರಾಗಿ ಅಧಿಕಾರವನ್ನು ಅನುಭವಿಸಿದವರು. ಹಾಗೂ ಅಧಿಕಾರವನ್ನು ಚಲಾಯಿಸಿದವರು. ಎರಡನೇ ಬಾರಿಗೆ ಜಿಲ್ಲಾ ಪಂಚಾಯತ್ ಅಧ್ಯಕರಾದ ಹೆಗ್ಗಳಿಕೆ ಸೌಭಾಗ್ಯ ಬಸವರಾಜನ್ ಗೆ ಸಲ್ಲುತ್ತದೆ.

ಆದ್ರೆ ಕೆಲವೊಂದು ಸಲ ಜಿಲ್ಲಾ ಪಂಚಾಯತ್ ಕೆಡಿಪಿ ಸಭೆ ಹಾಗೂ ಸಾಮಾನ್ಯ ಸಭೆಗಳಲ್ಲಿ ಅಧಿಕಾರಿಗಳ ಬಗ್ಗೆ ಕಟಿನ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ವಿಫಲರಾಗಿದ್ದಾರೆ ಎಂಬ ಕೂಗು ಜಿಲ್ಲಾ ಪಂಚಾಯತ್ ಸದಸ್ಯರು ಅಂಬೋಣ.

ಅಧ್ಯಕ್ಷ ಸ್ಥಾನ ಹಂಚಿಕೆ ವಿಚಾರದಲ್ಲಿ ನಡೆದ ಒಡಂಬಡಿಕೆಯಂತೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಲಿಲ್ಲ ಎಂಬುದು ಆಡಳಿತ ಸದಸ್ಯರು ಕೆಡಿಪಿ ಸಭೆ ನಡೆಯದಂತೆ ಪ್ರತಿಭಟನೆ ನಡೆಸಿದರು. ಅದು ಆ ಪಕ್ಷದ ಆಂತರಿಕ ವಿಚಾರವಾದರೂ ಸಹ. ಒಮೊಮ್ಮೆ ಸೌಭಾಗ್ಯ ಬಸವರಾಜನ್ ಯಾವುದಕ್ಕೂ ಕೇರ್ ಮಾಡದೇ ಆಡಳಿತವನ್ನು ನಡೆಸಿದವರು.

ಏನೆ ಆಗಲಿ ಸೌಭಾಗ್ಯ ಬಸವರಾಜನ್ ಎರಡು ಬಾರಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿದ್ದಾರೆ ಆಡಳಿತದ ಬಗ್ಗೆ ಅವಗಹನೆ ಇದೆ ಅಂತ ನಂಬಿದ ಜಿಲ್ಲೆಗೆ ಸೌಬಾಗ್ಯ ಬಸವರಾಜನ್ ಗರುತಿಸುವಂತ ಕೆಲಸಮಾಡಲಿಲ್ಲ. ಕೊಡಿಗೆ ಮಾತ್ರ ಶೂನ್ಯ ಎಂಬದು ಕೆಲವರ ಅಭಿಪ್ರಾಯ.

ಇನ್ನೂ ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ಜಿಲ್ಲೆಗೆ ಬಂದು ಅಧಿಕಾರ ವಹಿಸಿಕೊಂಡು ಮೂರು ತಿಂಗಳಾಗಿರ ಬಹುದು ಆದ್ರೆ ಕಡಿಮೆ ಅವಧಿಯಲ್ಲಿ ಹೆಚ್ಚು ಹೆಸರು ಹಾಗೂ ದಕ್ಷ ಜಿಲ್ಲಾಧಿಕಾರಿ ಎಂಬ ಹೆಗ್ಗಳಿಗೆ ಪಾತ್ರರಾಗಿದ್ದಾರೆ.
ನಗರದ ಸ್ವಚ್ಚತೆ ಬಗ್ಗೆ ತಾವೇ ಖುದ್ದು ಪರಿಶೀಲಿಸುವುದು. ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡುವುದು. ಗ್ರಾಮವಾಸ್ತವ್ಯ ಮಾಡಿದ್ದು, ಜಿಲ್ಲೆಗೆ ಬಂದ ಜಿಲ್ಲಾಧಿಕಾರಿ ಇವರೆ ಮೊದಲಿಗರು. ಮತ್ತೊಂದು ವಿಚಾರ ಅಂದ್ರೆ ತಾವು ಕಾಲವಾದ ನಂತರ ಸಾರ್ವಜನಿಕರ ಒಳತಿಗಾಗಿ ತಮ್ಮ ದೇಹವನ್ನು ದಾನಮಾಡಲು ಸಹಿ ಹಾಕಿದ್ದು ಬೇರೆ ಅಧಿಕಾರಿಗಳಿಗೆ ಮಾದರಿ ಆದ್ರು.

ಒಟ್ಟಿನಲ್ಲಿ ಒಬ್ಬರು ಚುನಾಯಿತ ಪ್ರತಿನಿಧಿಯಾದರೆ, ಮತ್ತೊಬ್ಬರು ಆಡಳಿತ ಚುಕ್ಕಾಣಿ ಹಿಡಿದವರು. ಇಬ್ಬರು ಮಹಿಳೆಯರು ಕೈ ಜೋಡಿಸಿದರೆ ಜಿಲ್ಲೆಗೆ ಒಳಿತಾಗ ಬಹುದಲ್ಲವೆ.?