ಬೆಂಗಳೂರು: ರಾಜ್ಯ ಸರ್ಕಾರದ ವತಿಯಿಂದ ಇದೇ 10ರಂದು ವರ್ಚುವಲ್ ಉದ್ಯೋಗ ಮೇಳ ನಡೆಯಲಿದ್ದು, ಉದ್ಯೋಗದ ನಿರೀಕ್ಷೆಯಲ್ಲಿರುವವರು ಹಾಗೂ ಉದ್ಯೋಗದಾತರ ಅನುಕೂಲಕ್ಕಾಗಿ ಪ್ರತ್ಯೇಕ ವೆಬ್ ಸೈಟ್ ಸ್ಥಾಪನೆ ಮಾಡಲಾಗಿದೆ.

https://skill connect.kaushalkar.com ಈ ವೆಬ್ ಸೈಟ್ ನಲ್ಲಿ ಉದ್ಯೋಗಾಕಾಂಕ್ಷಿಗಳು ಹಾಗೂ ಉದ್ಯೋಗದಾತರು ನೋಂದಾಯಿಸಬೇಕಿದ್ದು, ಇದಕ್ಕೆ ಜುಲೈ 8 ಕೊನೆಯ ದಿನವಾಗಿದೆ. ಇದರಲ್ಲಿ ಅಭ್ಯರ್ಥಿಗಳು ತಮಗೆ ಅಗತ್ಯವಿರುವ ಹುದ್ದೆಗಳ ವಿವರ ನೀಡಬೇಕಾಗಿದೆ.