ಬೆಂಗಳೂರು: ಪ್ರಮಾಣಿಕವಾಗಿ ಜನತೆಗೆ ಉತ್ತಮ ಆಡಳಿತ ನೀಡುವಲ್ಲಿ ಸಮಿಶ್ರ ಸರಕಾರ ಮುಂದಾಗಿದೆ ಎಂದು ಮುಖ್ಯ ಮಂತ್ರಿ ಕುಮಾರಸ್ವಾಮಿ ಹೇಳಿದರು.

ಸಚಿವ ಸಂಪುಟ ವಿಸ್ತರಣೆ ಆಗುತ್ತಿದ್ದಂತೆ ವಿಧಾನಸೌಧದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ಸಚಿವ ಸಂಪುಟದಲ್ಲಿ ಹಿರಿಯರು ಹಾಗೂ ಹೊಸಬರು ಮಂತ್ರಿಗಳಾಗಿದ್ದಾರೆ. ಎಲ್ಲರನ್ನು ಒಟ್ಟು ಗೂಡಿಸಿ ಸಾಮಾಜಿಕ ತಳಹದಿಯಲ್ಲಿ ಸರಕಾರ ನಡೆಸಲಾಗುತ್ತದೆ ಎಂದರು.

ನಾವು ಐದು ವರ್ಷ ಸರಕಾರ ನಡೆಸುತ್ತೇವೆ ಎಂದು ಭರವಸೆ ನೀಡಿದರು. ಜೊತೆಗೆ ಡಿ.ಸಿ.ಎಂ ಜಿ. ಪರಮೇಶ್ವರ್ ಸಾತ್ ನೀಡಿದರು.