ಉಡುಪಿ ಜಿಲ್ಲೆಯ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಟಿಡಿಆರ್ ವ್ಯವಸ್ಥೆಯಲ್ಲಿ ಉಡುಪಿ ನಗಾರಾಭಿವೃದ್ಧಿ ಪ್ರಾಧಿಕಾರದ ಸಹಕಾರದೊಂದಿಗೆ ಅಂಬಾಗಿಲು,ಪೆರಂಪಳ್ಳಿ, ಮಣಿಪಾಲ ಚತುಷ್ಪದ ರಸ್ತೆ ನಿರ್ಮಾಣ ಮತ್ತು ಡಾಂಬರೀಕರಣದ ಶಂಕುಸ್ಥಾಪನೆಯನ್ನು ಶಾಸಕ ರಘುಪತಿ ಭಟ್ ನೆರವೇರಿಸಿದರು.

ಬಳಿಕ ಮಾತನಾಡಿದ ಅವರು ಉಡುಪಿಯ ಇತಿಹಾಸದಲ್ಲೇ ಇಂತಹ ಒಂದು ವ್ಯವಸ್ಥೆಯನ್ನು ಮೊದಲ ಬಾರಿಗೆ ಪ್ರಯತ್ನಿಸುತ್ತಿದ್ದು, ಇದು ಯಶಸ್ವಿಯಾದರೆ ಮುಂದಿನ ದಿನಮಾನಗಳಲ್ಲಿ ಅಭಿವೃದ್ಧಿ ಕಾರ್ಯಗಳು ಸುಗಮವಾಗಲಿದೆ. ಜನ ಪ್ರತಿನಿಧಿಗಳು ಹಾಗೂ ನಾಗರೀಕರು
ಈ ಟಿಡಿಆರ್ ವ್ಯವಸ್ಥೆಗೆ ಸಂಪೂರ್ಣ ಬೆಂಬಲ ನೀಡಿದ್ದು, ಇನ್ನಷ್ಟು ಬಲ ತಂದಿದೆ ಎಂದರು.