ಮಹರಾಷ್ಟ್ರ: ಈ ಚಿತ್ರದಲ್ಲಿ ಕಾಣಿಸುತ್ತಿರುವ ಮಹಾರಾಷ್ಟ್ರದ ಈ ಹುಲಿಸಾಧಾರಣವಲ್ಲ. ಭಾರತದ ಯಾವ ಹುಲಿಯೂ ಮಾಡಿರದ ಸಾಧನೆ ಈ ಹುಲಿ ಮಾಡಿದೆ.

ಈ ಹುಲಿಯ ಹೆಸರು ವಾಕರ್,  ಈ ಹುಲಿ 9 ತಿಂಗಳಲ್ಲಿ ಬರೋಬ್ಬರಿ 3 ಸಾವಿರ ಕಿ.ಮೀ ಅಡ್ಡಾಡಿ ಬಂದಿದೆ. ಮಹಾರಾಷ್ಟ್ರದ 7 ಜಿಲ್ಲೆಗಳನ್ನು ದಾಟಿ ಪಕ್ಕದ ತೆಲಂಗಾಣದಲ್ಲಿ ಓಡೋಡಿ ಬಂದಿರುವ ಹುಲಿ ಕ್ರಮಿಸಿರುವ ಒಟ್ಟು ದೂರ ಬರೋಬರಿ 3 ಸಾವಿರ ಕಿ.ಮೀವರೆಗೆ.

ಈ ಹುಲಿಗೆ ಕಾಲರ್ ಐಡಿ ಅಳವಡಿಸಲಾಗಿತ್ತು. ಅದರ ಮೂಲಕ ಹುಲಿಯ ಚಲನವಲನಗಳನ್ನು ಪತ್ತೆ ಹಚ್ಚಲಾಗಿತ್ತು ಎನ್ನಲಾಗಿದೆ.