ಉಡುಪಿ : ಒಂದಲ್ಲ ಎರಡಲ್ಲ ಬರೋಬರಿ ಈ ನಾಗರಹಾವು 7 ಕೋಳಿ ಮೊಟ್ಟೆಗಳನ್ನು ನುಂಗಿ ಒದ್ದಾಡಿದ ಘಟನೆ ಉಡುಪಿಯ ಹಾವಂಜೆಯಲ್ಲಿ ನಡೆದಿದೆ.

ಹಾವಂಜೆಯ ಮನೆಯೊಂದಕ್ಕೆ ನುಗ್ಗಿದ ನಾಗರಹಾವು, ಕೋಳಿಯನ್ನು ಕೊಂದು ಏಳು ಮೊಟ್ಟೆಗಳನ್ನು ನುಂಗಿ ಹಟ್ಟಿಯ ಮೇಲ್ಛಾವಣಿಯಲ್ಲಿ ಅಡಗಿ ತ್ತು.  ಭಯಗೊಂಡ ಮನೆಯವರು ತಕ್ಷಣ ಉಡುಪಿಯ ಉರಗ ತಜ್ಞ ಗುರುರಾಜ್ ಸನಿಲ್ ಗೆ ಕರೆಸಿದ್ದಾರೆ. ತಕ್ಷಣ  ಹಾವಂಜೆಗೆ ಬಂದ ಗುರುರಾಜ್ ಮೊಟ್ಟೆಯನ್ನು ನುಂಗಿದ್ದ ಹಾವನ್ನು ಸೆರೆ ಹಿಡಿದು ನುಂಗಿದ ಮೊಟ್ಟೆಗಳನ್ನು ಕಕ್ಕಿಸುವಲ್ಲಿ ಯಶಸ್ವಿಆಗಿದ್ದಾರೆ ನಂತರ ಹಾವನ್ನು ಕಾಡಿಗೆ ಕರೆದುಕೊಂಡು ಹೋಗಿ ಬಿಟ್ಟು ಬಂದಿದ್ದಾರೆ. ಉರುಗ ತಜ್ನ ಗುರುರಾಜ್.

(ಸಾಂದರ್ಭಿಕ ಚಿತ್ರ)