ಹಲ್ಲು ನೋವು ಬಂದವರು ಅಬ್ಬಾ ಈ ನೋವು ಯಾವ ಶತ್ರುಗೂ ಬರಬಾರದು ಅಂತ ಹೇಳುವುದನ್ನು ಕೇಳಿರುತ್ತೀರ ಅಥವ ತಾವು ಅನುಭವಿಸಿರುತ್ತೀರ ಹಾಗದರೆ ಹಲ್ಲು ನೋವು ಬಂದ್ರೆ ಮನೆಯಲ್ಲಿರುವ ಮದ್ದನ್ನು ಬಳಸಿಕೊಂಡು ಉಪಶಮನ ಮಾಡಿಕೊಳ್ ಬಹುದು.

ಚಾಕೊಲೇಟ್, ಐಸ್ ಕ್ರೀಮ್ ತಿಂದು ಹಲ್ಲು ಹುಳುಕಾಗಿ ನೋವು ಕಾಣಿಸಿಕೊಂಡರೆ, ಬ್ರಶ್ ಮಾಡಿದ ಬಳಿಕ ಉಪ್ಪು ನೀರಿನಿಂದ ಬಾಯಿ ಮುಕ್ಕಳಿಸಿ. ಇದರಿಂದ ಹಲ್ಲಿನಡಿಯ ಕೊಳೆ ದೂರವಾಗಿ ಬಾಯಿ ಸ್ವಚ್ಛಗೊಳ್ಳುತ್ತದೆ.

ಇಂಗನ್ನು ಸಣ್ಣ ಉಂಡೆ ಮಾಡಿ ನೋವಿರುವ ಜಾಗದಲ್ಲಿ ಇಟ್ಟರೆ ಅದು ನೋವು ಹೀರಿಕೊಂಡು ನಿಮಗೆ ರಿಲೀಫ್ ನೀಡುತ್ತದೆ. ಲವಂಗವನ್ನೂ ಇದೇ ರೀತಿ ಬಳಸಬಹುದು. ಸೀಬೆ ಮರದ ಚಿಗುರನ್ನು ಕೊಯ್ದು ಕಷಾಯ ಮಾಡಿ ಆ ನೀರಿನಿಂದ ಬಾಯಿ ಮುಕ್ಕಳಿಸಿದರೆ ಬಾಯಿಯ ಕ್ರಿಮಿ ಕೀಟಗಳು ಸತ್ತು, ದುರ್ವಾಸನೆ ಕಡಿಮೆಯಾಗುತ್ತದೆ..