ಬೆಂಗಳೂರು: ಲೋಕಸಭಾ ಫಲಿತಾಂಶದ ಬಗ್ಗೆ  ಸಮೀಕ್ಷೆಗಳು ಹೊರಬರುತ್ತಿದ್ದಂತೆ,  ಈ ಹಿನ್ನೆಲೆಯಲ್ಲಿ ಕರ್ನಾಟಕ ಕಾಂಗ್ರೆಸ್ ಇಂದು ಟ್ವೀಟ್ ಮಾಡಿದೆ.

ಸಮೀಕ್ಷೆಗಳ ಅಂಕಿ-ಅಂಶಗಳ ಮಾಹಿತಿಯನ್ನು ತಳ್ಳಿಹಾಕಿದ್ದು, ಚುನಾವಣೋತ್ತರ ಸಮೀಕ್ಷೆಗಳು ಬಹುತೇಕ ಎಲ್ಲಾ ಸಂದರ್ಭಗಳಲ್ಲೂ ಸುಳ್ಳಾಗಿರುವ ನಿದರ್ಶನಗಳಿವೆ. ವಾಸ್ತವಕ್ಕೆ ದೂರವಾಗಿರುವ ಇಂತಹ ಸಮೀಕ್ಷಾ ವರದಿಗಳನ್ನು ನಂಬಲು ಸಾಧ್ಯವಿಲ್ಲ. ಕರ್ನಾಟಕದಲ್ಲಿ ಅಂದಾಜಿಗೂ ಮೀರಿ ಹೆಚ್ಚು ಸ್ಥಾನಗಳನ್ನು ಗೆಲ್ಲುವ ವಿಶ್ವಾಸವಿದೆ. ಮೇ. 23ರವರೆಗೆ ಕಾದು ನೋಡೋಣ ಎಂದು ಟ್ವೀಟ್ ಮಾಡಿದೆ.