ಬೆಂಗಳೂರು: ಅಂತು ಸಚಿವ ಸಂಪುಟ ರಚನೆಗೆ ಕಾಲ ಕೂಡಿ ಬಂದಿದೆ. ಕುಮಾರಸ್ವಾಮಿ ಮುಖ್ಯ ಮಂತ್ರಿ ಆಗಿ ಪ್ರಮಾಣ ವಚನ ಸ್ವೀಕರಿಸಿದರು ಸಂಪುಟ ರಚನೆಗೆ ದೋಸ್ತಿ ಸರಕಾರದಲ್ಲಿ ಹಗ್ಗ ಜಗ್ಗಾಟ ನಡೆಯುತಿತ್ತು. ಈಗ ಘಳಿಗೆ ಕೂಡಿ ಬಂದಿದೆ.

ಇನ್ನೇರಡು ದಿವಸದಲ್ಲಿ ಸಚಿವ ಸಂಪುಟ ವಿಸ್ತರಣೆ  ಆಗುವ ಸಾಧ್ಯತೆಯನ್ನು ತಳ್ಳಿಹಾಖುವಂತ್ತಿಲ್ಲ.

ಇದೇ ವೇಳೆ ಅವರು ಸಚಿವ ಸಂಪುಟದ ಬಳಿಕ ಸರ್ಕಾರದ ಎಲ್ಲಾ ಆಡಳತ ಕೆಲಸ ಕಾರ್ಯಗಳು ಸುಲಭವಾಗಿ ನಡೆದುಕೊಂಡು ಹೋಗುವುದರಲ್ಲಿ ಅನುಮಾನವಿಲ್ಲ ಹೀಗಾಗಿ ಇನ್ನೇರಡು ದಿವಸದಲ್ಲಿ ಅಂದರೆ ಶುಕ್ರವಾರ ಅಥಾವ ಸೋಮವಾರ ಸಚಿವ ಸಂಪುಟ ರಚನೆಆಗಲಿದೆ.

ಇನ್ನು ಸಚಿವ ಸಂಪುಟ ವಿಸ್ತರಣೆ ವೇಳೆಯಲ್ಲಿ ಖಾತೆ ಹಂಚಿಕೆಗೆ ವಿವಾದ ಬಹುತೇಕ ಕೊನೆಗೊಂಡಿದೆ. ಹಣಕಾಸು, ನೀರಾವರಿ. ಸಾರಿಗೆ. ಗೃಹ, ಆರೋಗ್ಯ, ಬೃಹತ್ ಕೈಗಾರಿಕೆ ಸೇರಿದಂತೆ ಇನ್ನೀತ್ತರ ಪ್ರಮುಖ ಖಾತೆಗಳನ್ನು ಯಾವ ಪಕ್ಷಕ್ಕೆ, ಯಾರಿಗೆ ನೀಡಬೇಕು ಅನ್ನೊಂದು ಕೂಡ ಫೈನಲ್ ಆಗಿದೆ ಎನ್ನಲಾಗಿದ್ದು ಇನ್ನೇರಡು ದಿನಗಳಲ್ಲಿ ಹೊಸ ಖಾತೆಯೊಂದಿಗೆ ಹೊಸ ಮಂತ್ರಿಗಳು ಬರಲಿದ್ದಾರೆ.