ಮಹಾರಾಷ್ಟ್ರ:  ಪಿಂಪಿರಿ-ಚಿಂಚವಾಡ ಜಿಲ್ಲೆಯ ವ್ಯಕ್ತಿಯೊಬ್ಬರು ದುಬಾರಿ ಬೆಲೆಯ ಮಾಸ್ಕ್ ಧರಿಸುವ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಚರ್ಚೆಯಲ್ಲಿದ್ದಾರೆ.

ಶಂಕರ್ ಕುರಾಡೆ ಎಂಬುವವರು ಕೊರೋನಾ ವೈರಸ್ ಸೋಂಕಿನಿಂದ ಸುರಕ್ಷಿತವಾಗಿರಲು ಚಿನ್ನದ ಮಾಸ್ಕ್ ಧರಿಸಿದ್ದು, ಈಗ ಚರ್ಚೆಗೆ ಗ್ರಾಸವಾಗಿದ್ದಾರೆ. ಈ ಮಾಸ್ಕ್ ಬೆಲೆ 2.89 ಲಕ್ಷ ಇದೆ. ಮಾಧ್ಯಮದಲ್ಲಿ ಬೆಳ್ಳಿಯ ಮಾಸ್ಕ್ ಧರಿಸಿದ ವ್ಯಕ್ತಿಯೊಬ್ಬರಿಂದ ಪ್ರೇರಣೆ ಪಡೆದು ಚಿನ್ನದ ಮಾಸ್ಕ್ ಮಾಡಿಸಿರುವುದಾಗಿ ಶಂಕರ್ ಹೇಳಿದ್ದಾರೆ.!