ಬೆಂಗಳೂರು : ಪ್ರತಿ ವರ್ಷ ನವೆಂಬರ್ 1 ರಂದು ನೀಡಲಾಗುತ್ತಿದ್ದ ರಾಜ್ಯೋತ್ಸವ ಪ್ರಶಸ್ತಿಯನ್ನು ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಈ ಬಾರಿ ರದ್ದುಪಡಿಸಲು ಸರ್ಕಾರ ನಿರ್ಧಾರ ಕೈಗೊಂಡಿದೆ ಎಂದು ತಿಳಿದುಬಂದಿದೆ.

 ಈ ವರ್ಷ 66 ಜನರಿಗೆ ಪ್ರಶಸ್ತಿ ನೀಡಬೇಕು. ಈ ಸಲದ ಬದಲು ಮುಂದಿನ ವರ್ಷ ಎರಡು ವರ್ಷದ್ದೂ ಸೇರಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡುವ ಬಗ್ಗೆ ಸರಕಾರ ಚಿಂತನೆ ನಡೆಸಿದೆಯಂತೆ.!

ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿನ ಜೊತೆಗೆ ಬಹುತೇಕ ಜಿಲ್ಲೆಗಳಲ್ಲಿ ಭಾರೀ ಮಳೆಯಿಂದಾಗಿ ಪ್ರವಾಹ ಉಂಟಾಗಿರುವ ಕಾರಣ ಈ ಬಾರಿಯ ರಾಜ್ಯೋತ್ಸ ಪ್ರಶಸ್ತಿ ರದ್ದುಪಡಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ತಿಳಿದುಬಂದಿದೆ.