ಚಿತ್ರದುರ್ಗ: ಈ ಬಾರಿಯ ಲೋಕಸಭಾ ಚುನಾವಣೆ ಬಿಜೆಪಿ.ಅಭ್ಯರ್ಥಿಯನ್ನಾಗಲಿ, ಪಕ್ಷವನ್ನಾಗಲಿ, ನರೇಂದ್ರಮೋದಿಯನ್ನಾಗಲಿ ಗೆಲ್ಲಿಸುವ ಚುನಾವಣೆಯಲ್ಲ. ಭಾರತವನ್ನು ಗೆಲ್ಲಿಸುವ ಚುನಾವಣೆಯಾಗಿರುವುದರಿಂದ ಪ್ರಜ್ಞಾವಂತರು ಜಾತಿ ಮೀರಿ ಮತ ಹಾಕುವ ನಿರ್ಧಾರ ಮಾಡಬೇಕೆಂದು ಬಿಜೆಪಿ.ರಾಜ್ಯ ಪ್ರಧಾನ ಕಾರ್ಯದರ್ಶಿ ಶಾಸಕ ಸಿ.ಟಿ.ರವಿ ಜನತೆಯಲ್ಲಿ ವಿನಂತಿಸಿದರು.

ಭಾರತೀಯ ಜನತಾಪಾರ್ಟಿಯಿಂದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಗುರುವಾರ ನಡೆದ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಪ್ರಬುದ್ದರ ಗೋಷ್ಟಿಯಲ್ಲಿ ಭಾಗವಹಿಸಿ ಮಾತನಾಡಿದರು.
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ.ಗೆ ಬಹುಮತ ನೀಡಿ ಇನ್ನು ಐದು ವರ್ಷಗಳ ಕಾಲ ನರೇಂದ್ರಮೋದಿಯನ್ನು ದೇಶದ ಪ್ರಧಾನಿಯನ್ನಾಗಿ ಮಾಡಿದರೆ ಭ್ರಷ್ಟಾಚಾರಕ್ಕೆ ಸಂಪೂರ್ಣವಾಗಿ ಕಡಿವಾಣ ಬೀಳಲಿದೆ. ವಂಶಪಾರಂಪರ್ಯ, ಜಾತಿ ರಾಜಕಾರಣ ತೊಲಗಿ ಯೋಗ್ಯತೆ ಇರುವವರು ಚುನಾವಣೆಯಲ್ಲಿ ಗೆದ್ದುಬರುವಂತ ವಾತಾವರಣ ನಿರ್ಮಾಣವಾಗಲಿದೆ. ಹಣದ ಹೊಳೆ, ಜಾತಿ ರಾಜಕಾರಣ ಆರಂಭಗೊಂಡಿದ್ದು, ಜೆಡಿಎಸ್.ಕಾಂಗ್ರೆಸ್‍ನಿಂದ ಎನ್ನುವುದು ಎಲ್ಲರಿಗೂ ಗೊತ್ತಾಗಿದೆ. ನಾಲ್ಕುವರೆ ವರ್ಷಗಳ ಕಾಲ ದೇಶದ ಪ್ರಧಾನಿಯಾಗಿ ಸ್ವಚ್ಚ ಮತ್ತು ಪಾರದರ್ಶಕ ಆಡಳಿತ ನಡೆಸಿದ ನರೇಂದ್ರಮೋದಿ ದೇಶದ ಜನರ ಅಗತ್ಯೆತೆಗಳನ್ನು ಪೂರೈಸುವತ್ತು ಗಮನ ಕೊಟ್ಟಿದ್ದಾರೆ. ಈಗ ಇನ್ನು ಐದು ವರ್ಷ ಅಧಿಕಾರ ನೀಡಿದರೆ ಜನರ ಆಶೋತ್ತರಗಳನ್ನು ಈಡೇರಿಸಲಿದ್ದಾರೆ. ಅದಕ್ಕಾಗಿ ದೇಶ ಭ್ರಷ್ಟಾಚಾರಿಗಳ ಕೈಗೆ ಸಿಗಬಾರದೆಂದರೆ ಜನಸಾಮಾನ್ಯರು ಚೌಕಿದಾರರಾಗಬೇಕು ಎಂದು ಮನವಿ ಮಾಡಿದರು.

ಬಿಜೆಪಿ.ಜಿಲ್ಲಾಧ್ಯಕ್ಷ ಕೆ.ಎಸ್.ನವೀನ್, ವಿಭಾಗೀಯ ಸಹ ಪ್ರಭಾರಿ ಜಿ.ಎಂ.ಸುರೇಶ್ ವೇದಿಕೆಯಲ್ಲಿದ್ದರು.
ಲೋಕಸಭಾ ಉಸ್ತುವಾರಿ ಡಾ.ಎ.ಹೆಚ್.ಶಿವಯೋಗಿಸ್ವಾಮಿ, ಪ್ರಭಾರಿ ಟಿ.ಜಿ.ನರೇಂದ್ರನಾಥ್, ಎಂ.ಎ.ಸೇತೂರಾಂ, ಸಿದ್ದೇಶ್‍ಯಾದವ್, ಸೂರನಹಳ್ಳಿ ವಿಜಯಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರತ್ನಮ್ಮ, ಚಂದ್ರಿಕ ಲೋಕನಾಥ್, ಬಸಮ್ಮ, ಮಾಧ್ಯಮ ವಕ್ತಾರ ದಗ್ಗೆಶಿವಪ್ರಕಾಶ್, ವಕ್ತಾರ ನಾಗರಾಜ್‍ಬೇದ್ರೆ, ಕಲ್ಲಂಸೀತಾರಾಮರೆಡ್ಡಿ, ಇನ್ನು ಮುಂತಾದವರು ಪ್ರಬುದ್ದರ ಗೋಷ್ಟಿಯಲ್ಲಿ ಹಾಜರಿದ್ದರು.