ನವದೆಹಲಿ: 4 ತಿಂಗಳ ಮುಂಗಾರು ಎರಡನೇ ಅವಧಿ ಆಗಿರುವ ಆಗಸ್ಟ್ ಮತ್ತು ಸೆಪ್ಟಂಬರ್ ನಲ್ಲಿ ಶೇಕಡ 104 ರಷ್ಟು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಸಾಮಾನ್ಯವಾಗಿ ಶೇಕಡ 96 ರಿಂದ ಶೇಕಡ 100ರಷ್ಟು ಮಳೆಯಾದರೆ ವಾಡಿಕೆ ಮಳೆ ಎಂದು ಹೇಳಲಾಗುತ್ತದೆ. ಆಗಸ್ಟ್ ತಿಂಗಳಲ್ಲಿ ಶೇಕಡ 97 ರಷ್ಟು ಮಳೆಯಾಗಲಿದ್ದು, ಆಗಸ್ಟ್ ಸೆಪ್ಟಂಬರ್ ನಲ್ಲಿ ಶೇಕಡ 104 ರಷ್ಟು ಸರಾಸರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಅಂದಾಜು ಮಾಡಿದೆ.

ದೇಶದ ಬಹುತೇಕ ಭಾಗದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಕೃಷಿ ಚಟುವಟಿಕೆಗಳು ಮುಂದುವರಿದಿದ್ದು ಕೃಷಿಕರು ಕೃಷಿ ವಲಯ ಖುಷಿಯಲ್ಲಿದೆ. ಇದೇ ವೇಳೆ ಉತ್ತರ ಭಾರತ ಮತ್ತು ಈಶಾನ್ಯ ಭಾರತ ಹಲವೆಡೆ ಪ್ರವಾಹ ಪರಿಸ್ಥಿತಿ ಉಂಟಾಗಿ ಜನ ತತ್ತರಿಸಿದ್ದಾರೆ.