ನಮ್ಮ ರಕ್ತವನ್ನು ಶುದ್ಧೀಕರಿಸಿದರೆ ಕಿಡ್ನಿ, ಲಿವರ್, ಹೃದಯ ಎಲ್ಲವೂ ಚೆನ್ನಾಗಿ ಕಾರ್ಯ ನಿರ್ವಹಿಸುತ್ತವೆ. ಹೂಕೋಸು ರಕ್ತ ಶುದ್ಧೀಕರಿಸುವುದರಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.

ನಮ್ಮ ದೇಹದಲ್ಲಿನ ಟಾಕ್ಸಿನ್ ಅನ್ನು ಕಡಿಮೆ ಮಾಡುವ ಈ ತರಕಾರಿಯಲ್ಲಿ ಕ್ಯಾಲ್ಸಿಯಂ, ವಿಟಮಿನ್ ಸಿ, ಓಮೇಗಾ-3 ಫ್ಯಾಟಿ ಆಸಿಡ್, ಡಯೆಟ್ರಿ ಫೈಬರ್, ಪೋಟ್ಯಾಷಿಯಂ ಅಧಿಕವಾಗಿರುತ್ತದೆ. ನಿತ್ಯ ಇದನ್ನು ಸೇವಿಸುವುದರಿಂದ ದೇಹದಲ್ಲಿನ ರಕ್ತ ಶುದ್ಧೀಕರಣಗೊಂಡು ನಮ್ಮ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.