ನವದೆಹಲಿ: ಸುಪ್ರೀಂ ಕೋರ್ಟ್ ಇಂದು ಲೋನ್ಮೊರೆಟೋರಿಯಂ ಪ್ರಕರಣದ ವಿಚಾರಣೆ ನಡೆಸಿದ್ದು, ಕ್ರೆಡಿಟ್ ಕಾರ್ಡ್ ಗ್ರಾಹಕರಿಗೆ ಚಕ್ರಬಡ್ಡಿ ಮನ್ನಾ ಮಾಡುವ ಸೌಲಭ್ಯ ನೀಡಬಾರದು ಎಂದು ಹೇಳಿದೆ.

ಕ್ರೆಡಿಟ್ ಕಾರ್ಡ್ ಗ್ರಾಹಕರು ಸಾಲಗಾರರಲ್ಲ, ಅವರು ಖರೀದಿ ಮಾಡುತ್ತಾರೆಯೇ ಹೊರತು ಸಾಲ ಮಾಡುವುದಿಲ್ಲ ಎಂದು ಕೋರ್ಟ್ ಹೇಳಿದೆ.

ಇನ್ನೊಂದೆಡೆ, ಸರ್ಕಾರ ಈಗಾಗಲೇ ಗರಿಷ್ಠ ಪ್ರಮಾಣದ ಸವಲತ್ತು ನೀಡಿದ್ದು, ಇನ್ನು ಮುಂದೆ ಯಾವುದೇ ಹೆಚ್ಚಿನ ಪರಿಹಾರ ಪರಿಗಣಿಸದಂತೆ ಕೇಂದ್ರ ಸರ್ಕಾರ ನ್ಯಾಯಾಲಯಕ್ಕೆ ಮನವಿ ಮಾಡಿದೆ.