ಬೆಂಗಳೂರು: ಕಾರ್ತಿಕ ಪೂರ್ಣಿಮೆ ಎನ್ನುವುದು ಹುಣ್ಣಿಮೆಯ ದಿನವಾಗಿದ್ದು, ಹಿಂದೂಗಳ ಪವಿತ್ರ ದಿನವಾಗಿದೆ.

ಸಿಖ್ಖರ ಹಬ್ಬವಾದ ಗುರುನಾನಕ್ ಜಯಂತಿಯೊಂದಿಗೆ ಏಕಕಾಲಕ್ಕೆ ನಡೆಯುತ್ತದೆ. ಇದನ್ನು ಕೆಲವೊಮ್ಮೆ ದೇವ-ದೀಪಾವಳಿ ಅಥವಾ ದೇವರ ಬೆಳಕಿನ ಹಬ್ಬ ಎಂದು ಕರೆಯಲಾಗುತ್ತದೆ.

ಜಗತ್ತನ್ನು ಆಕ್ರಮಿಸಿದ್ದ ತ್ರಿಪುರಾಸುರ ಎಂಬ ರಾಕ್ಷಸನನ್ನು ಶಿವ ಸಂಹಾರ ಮಾಡಿದ ನೆನಪಿಗಾಗಿ ಈ ಹಬ್ಬವನ್ನು ಆಚರಿಸಲಾಗುತ್ತಿದೆ ಎಂಬುದು ಪ್ರತೀತಿ. ಈ ದಿನದಂದು ಕೃಷ್ಣ ರಾಧೆಯನ್ನು ವರಿಸಿದನೆಂದು ನಂಬಲಾಗಿದೆ.!