ಚಿತ್ರದುರ್ಗ; ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಈಶ್ವರಗೆರೆಯಲ್ಲಿ ಜೂನ್ 21 ರಂದು 15.2 ಮಿ.ಮೀ ನಷ್ಟು ಮಳೆಯಾಗಿದೆ. ಜಿಲ್ಲೆಯ ವಿವಿಧೆಡೆ ಆದ ಮಳೆ ವಿವರ ಇಂತಿದೆ.

ಹಿರಿಯೂರು ತಾಲ್ಲೂಕು ವ್ಯಾಪ್ತಿಯ ಇಕ್ಕನೂರು 2.6 ಮಿ.ಮೀ., ಹೊಳಲ್ಕೆರೆ ತಾಲ್ಲೂಕು ವ್ಯಾಪ್ತಿಯ ಹೊಳಲ್ಕೆರೆ 14.4, ರಾಮಗಿರಿ 2.4, ಚಿಕ್ಕಜಾಜೂರು 4.6, ಬಿ.ದುರ್ಗ 8.2, ಚಳ್ಳಕೆರೆ ತಾಲ್ಲೂಕಿನ ದೇವರ ಮರಿಕುಂಟೆ 3.2, ಚಿತ್ರದುರ್ಗ ತಾಲ್ಲೂಕು ವ್ಯಾಪ್ತಿಯ ಚಿತ್ರದುರ್ಗ-1 ರಲ್ಲಿ 10, ಚಿತ್ರದುರ್ಗ-2 ರಲ್ಲಿ 11, ಹೀರೆಗುಂಟನೂರು 01, ಸಿರಿಗೆರೆ 5.4 ಮಿ.ಮೀ ನಷ್ಟು ಮಳೆಯಾಗಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.