ಬೆಂಗಳೂರು: ರಾಜ್ಯದ ಮಾರುಕಟ್ಟೆಗಳಲ್ಲಿ ಈರುಳ್ಳಿ ಆವಕ ಹೆಚ್ಚಾಗಿದ್ದು ಬೆಲೆ ಕುಸಿತವಾಗಿದೆ. ಸ್ಥಳೀಯವಾಗಿ ಬೆಳೆದ ಈರುಳ್ಳಿ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಬರುತ್ತಿರುವ ಕಾರಣ ಬೆಲೆ ಪಾತಳಕ್ಕೀಳಿದಿದೆ.

ಒಂದು ಕೆಜಿ ಈರುಳ್ಳಿ 10 ರೂ.ಗೆ ಮಾರಾಟವಾಗುತ್ತಿದ್ದು, 50 ಕೆಜಿ ಚೀಲಕ್ಕೆ 350 ರಿಂದ 450 ರೂ. ದರವಿದೆ. ಸಭೆ ಸಮಾರಂಭಗಳಿಗೆ ಅವಕಾಶ ಇಲ್ಲದಿರುವುದರಿಂದ ಹೆಚ್ಚಿನ ಈರುಳ್ಳಿ ಮಾರಾಟವಾಗುತ್ತಿಲ್ಲ. ಇದರಿಂದ ಮಾರುಕಟ್ಟೆಗೆ ಬಂದ ಈರುಳ್ಳಿಗೆ ಬೆಲೆ ಕಡಿಮೆಯಾಗಿದೆ. ಮೊದಲು ಗ್ರಾಹಕನ ಕಣ್ಣಲ್ಲಿ ಕಣ್ಣೀರು  ಬಂತು ಈಗ  ಈರುಳ್ಳಿ ಬೆಳೆದ ರೈತನ ಸರದಿ.!