ಬೆಂಗಳೂರು : ಈರುಳ್ಳಿ ಬೆಲೆ ದಿನ ದಿನಕ್ಕೆ  ದುಪ್ಪಟ್ಟು ಆಗುತ್ತಿದೆ. ಈರುಳ್ಳಿ ಬೆಳೆದ ರೈತನ ಮೊಗದಲ್ಲಿ ಮಂದಹಾಸ ಕಂಡರೆ ಗ್ರಾಹಕನ ಕಣ್ಣಲ್ಲಿ ನೀರು ಬರುತ್ತಿದೆ. ಈ ಗಾಗಲೇ  ಕೆಲವು ಭಾಗದಲ್ಲಿ 100ರ ಗಡಿ ದಾಟಿದೆ.

ರಾಜಧಾನಿ ಬೆಂಗಳೂರಿನ ಯಶವಂತಪುರ ಎಪಿಎಂಸಿ­ಯಲ್ಲಿ ಸಗಟು ದರದಲ್ಲಿ ಪೂನಾದ ದಪ್ಪ ಈರುಳ್ಳಿ ಕೆ.ಜಿ.ಗೆ 90ರೂ. ಇದ್ದರೆ, ಕರ್ನಾಟಕದ ಬಳ್ಳಾರಿ, ಚಿತ್ರದುರ್ಗ ಮತ್ತಿತರ ಭಾಗಗಳ ಮಧ್ಯಮ ಗಾತ್ರದ ಈರುಳ್ಳಿ ದರ ಕೆ.ಜಿ.ಗೆ 60-70 ರೂ.ಗೆ ಮಾರಾಟವಾಗುತ್ತಿದೆ. ಇನ್ನು ಪ್ರತಿವರ್ಷ ಈ ವೇಳೆಗೆ ಎಪಿಎಂಸಿ ಮಾರುಕಟ್ಟೆಗೆ ಪ್ರತಿ ದಿನ ಸುಮಾರು 1 ಲಕ್ಷ ಮೂಟೆ ಈರುಳ್ಳಿ ಬರಬೇಕಾ­ಗಿತ್ತು. ಆದರೆ ಈಗ ಕೇವಲ 63 ಸಾವಿರ ಮೂಟೆ ಮಾತ್ರ ಸರಬರಾಗುತ್ತಿದೆ.

ಇನ್ನು ಕಡಲತಡಿ ಮಂಗಳೂರಿನಲ್ಲಿಯೂ ಈರುಳ್ಳಿ ಬೆಲೆ ದಿನೇ ದಿನೇ ಏರಿಕೆಯಾಗುತ್ತಿದ್ದು, ಕೆ.ಜಿ.ಗೆ ನೂರರ ಗಡಿ ದಾಟಿದೆ. ಕಳೆದ ಕೆಲವು ದಿನಗಳಿಂದ ಈರುಳ್ಳಿ ದರ ಕೆಜಿಗೆ 90ರಿಂದ 96ರೂ. ಇತ್ತು. ಆದರೆ, ನಿನ್ನೆಯಿಂದ 110ರೂ.ಗೆ ಏರಿದೆ. ಇನ್ನು ಬೆಳ್ಳುಳ್ಳಿ ದರವೂ ಒಂದು ಕೆಜಿಗೆ 220 ರೂ.ಗೆ ಏರಿಕೆಯಾಗಿದೆ.!