ಯಾದಗಿರಿ : ಭೀಮಾ ನದಿಯಲ್ಲಿ ಈಜಲು ಹೋಗಿದ್ದ ನಾಲ್ವರು ಯುವಕರು ನೀರು ಪಾಲಾದ ಘಟನೆ ಯಾದಗಿರಿ ನಗರದ ಗುರುಸಣಗಿ ಬ್ರಿಡ್ಜ್ ಬಳಿ ನಡೆದಿದೆ.

ಯಾದಗಿರಿಯ ಅಮಾನ್ (16), ರೆಹಮಾನ್ (16), ಆಯಾನ್ (16) ಹಾಗೂ ಕಲಬುರಗಿ ಮೂಲದ ರೆಹಮಾನ್ (15) ನಾಲ್ವರು ಯುವಕರು ನದಿಗೆ ಈಜಲು ಹೋಗಿ ನೀರುಪಾಲಾಗಿದ್ದಾರೆ.

ಘಟನಾ ಸ್ಥಳಕ್ಕೆ ಡಿಸಿ ರಾಗಪ್ರಿಯ ಭೇಟಿ ನೀಡಿ ವಿಚಾರಣೆ ನಡೆಸಿದ್ದಾರೆ ಎಂಧು ತಿಳಿದು ಬಂದಿದೆ.