ಬೆಂಗಳೂರು: ರಾಜ್ಯದ ಶೇ.94ರಷ್ಟು ಸೋಂಕಿತರಲ್ಲಿ ರೋಗ ಲಕ್ಷಣವೇ ಇರಲಿಲ್ಲ ಎಂಬ ಅಂಶ ಹೊರಬಂದಿದೆ.!

ರಾಜ್ಯದಲ್ಲಿ ವರದಿಯಾದ ಒಟ್ಟು ಕೊರೋನಾ ಪ್ರಕರಣಗಳಲ್ಲಿ ಶೇ.4ರಷ್ಟು ಮಂದಿಯಲ್ಲಿ ಮಾತ್ರ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿವೆ.

ಎಂಬ ಅಂಶವನ್ನು ರಾಜ್ಯ ಕೋವಿಡ್-19 ವಾರ್ ರೂಮ್ ಬಿಡುಗಡೆ ಮಾಡಿದ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಉಳಿದ ಶೇ.96ರಷ್ಟು ಪ್ರಕರಣಗಳಲ್ಲಿ ರೋಗ‌ ಲಕ್ಷಣವೇ ಇರಲಿಲ್ಲ. ಆದರೆ, ಪರೀಕ್ಷೆ ಬಳಿಕ ಸೋಂಕಿತರು ಎಂಬುದು ಬೆಳಕಿಗೆ ಬಂದಿದೆ. ರೋಗಿಗಳ ಸಂಪರ್ಕಕ್ಕಿಂತ ಬೇರೆ ರಾಜ್ಯಗಳಿಂದ ಬಂದವರೇ ಹೆಚ್ಚಾಗಿ ಸೋಂಕಿತರಾಗಿದ್ದಾರೆ ಎಂದು ತಿಳಿದುಬಂದಿದೆ.!