ಬೆಂಗಳೂರು: ಯಡಿಯೂರಪ್ಪ ಸರಕಾರ ಬೀದಿ ಬದಿ ವ್ಯಾಪಾರಸ್ತರಿಗೆ ಹಾಗೂ ಹಣ್ಣು ಮತ್ತು ತರಕಾರಿ ಬೆಳೆಗಾರರಿಗೆ 137 ಕೋಟಿ ರೂಪಾಯಿ, ಪ್ಯಾಕೇಜ್ ಹ್ಯಾಂಡ್ಲೂಮ್ ಘಟಕಗಳ ಕಾರ್ಮಿಕರಿಗೆ 25 ಕೋಟಿ ರೂ. ಪ್ಯಾಕೇಜ್ ನೀಡಲಾಗುವುದು. ಹಣ್ಣು ಮತ್ತು ತರಕಾರಿ ಬೆಳೆಗಾರರಿಗೆ ಪ್ಯಾಕೇಜ್ ಘೋಷಣೆ ಮಾಡಲಾಗಿದ್ದು ಪ್ರತಿ ಹೆಕ್ಟೇರಿಗೆ 15 ಸಾವಿರ ರೂ. ಘೋಷಣೆ ಮಾಡಲಾಗಿದೆ. 7 ಹಣ್ಣುಗಳು ಮತ್ತು 10 ತರಕಾರಿ ಬೆಳೆಗಳಿಗೆ ಪ್ಯಾಕೇಜ್ ಅನ್ವಯವಾಗಲಿದೆ.

ಬಾಳೆ, ಪಪ್ಪಾಯಿ, ದ್ರಾಕ್ಷಿ, ಅಂಜೂರ, ಅನಾನಸ್, ಕಲ್ಲಂಗಡಿ ಮತ್ತು ಕರಬೂಜ, ಬೋರೆ, ಬೆಣ್ಣೆ ಹಣ್ಣು, ತರಕಾರಿ ಬೆಳೆಗಳಾದ ಟೊಮೆಟೊ, ಹಸಿರು ಮೆಣಸಿನಕಾಯಿ, ಹೂಕೋಸು, ಎಲೆಕೋಸು, ಸಿಹಿಕುಂಬಳ, ಬೂದಗುಂಬಳ, ಕ್ಯಾರೆಟ್, ಈರುಳ್ಳಿ, ದಪ್ಪಮೆಣಸಿನಕಾಯಿ, ಸೊಪ್ಪು, ಹೀರೇಕಾಯಿ, ತೊಂಡೆಕಾಯಿ ಬೆಳೆದ ರೈತರಿಗೆ ಪರಿಹಾರ ನೀಡಲಾಗುವುದು.

ಕೈಮಗ್ಗ ನೇಕಾರರಿಗೆ ಎರಡು ಸಾವಿರ ರೂಪಾಯಿಗಳಂತೆ ಪರಿಹಾರ ನೀಡಲು ನಿರ್ಧರಿಸಲಾಗಿದೆ. ಪ್ರಸ್ತುತ ಒಂದು ಬಾರಿಗೆ ಪರಿಹಾರ ಸೌಲಭ್ಯವನ್ನು ರಾಜ್ಯದಲ್ಲಿರುವ 1.25 ಲಕ್ಷ ವಿದ್ಯುತ್ಚಾಲಿತ ಘಟಕಗಳಿಗೆ ಕೂಡ ವಿಸ್ತರಿಸಲು ನಿರ್ಧರಿಸಲಾಗಿದೆ. ಕಾರ್ಮಿಕರಿಗೆ 2000 ರೂ. ಗಳಂತೆ ಒಟ್ಟು 25 ಕೋಟಿ ರೂಪಾಯಿ ಪರಿಹಾರ ನೀಡಲಾಗುವುದು ಎಂದು ಹೇಳಲಾಗಿದೆ.