ಬೆಂಗಳೂರು: ಮಾಸ್ಕ್ ಅಳವಡಿಕೆ ನೀತಿಯನ್ನು ಸಡಿಲಿಸುವಂತೆ ಸಾರ್ವಜನಿಕರು ಮಾಡಿಕೊಂಡ ಮನವಿಗೆ ಸ್ಪಂದಿಸಿರುವ ಬಿಬಿಎಂಪಿ, ಮಾಸ್ಕ್ ಕಡ್ಡಾಯದಲ್ಲಿ ಸ್ವಲ್ಪ ರಿಲ್ಯಾಕ್ಸ್ ನೀಡಿದೆ.

ಬೈಕ್ ಮತ್ತು ಕಾರುಗಳಲ್ಲಿ ಏಕಾಂಗಿಯಾಗಿ ಸಂಚರಿಸುವವರಿಗೆ ಮಾಸ್ಕ್ ಇನ್ಮುಂದೆ ಕಡ್ಡಾಯವಿಲ್ಲ. ಆದರೆ, ಹಿಂಬದಿ ಸವಾರ ಮತ್ತು ಕಾರಿನಲ್ಲಿ ಇತರ ಪ್ರಯಾಣಿಕರಿದ್ದಾಗ ಮಾತ್ರ ಮಾಸ್ಕ್ ಅಳವಡಿಸಿಕೊಳ್ಳಬೇಕು. ಅಲ್ಲದೆ, ಸಾರ್ವಜನಿಕ ಸಭೆ, ಸಮಾರಂಭಗಳಲ್ಲಿ ಭಾಗವಹಿಸುವವರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ಹೇಳಿದೆ.