ಬೆಂಗಳೂರು: ರಾಜ್ಯದಲ್ಲಿ ಮದ್ಯ ನಿಷೇಧಿಸಬೇಕೆಂಬ ಕೂಗು ಹಲವು ವರ್ಷಗಳಿಂದ ಕೇಳಿ ಬರುತ್ತಿದ್ದು, ಯಾವ ಸರ್ಕಾರವೂ ಈ ನಿರ್ಧಾರ ಪ್ರಕಟಿಸುತ್ತಿಲ್ಲ. ಆದರೆ, ಈಗ ಬಾರ್ ಹಾಗೂ ರೆಸ್ಟೋರೆಂಟ್​​​ಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮಹತ್ವದ ಆದೇಶ ಜಾರಿ ಮಾಡುವ ಸಾಧ್ಯತೆ ದಟ್ಟವಾಗಿದೆ.

ಅದೇನೆಂದರೆ ಇನ್ಮುಂದೆ ಬಾರ್​ ಮತ್ತು ರೆಸ್ಟೋರೆಂಟ್​​ಗಳಿಗೆ ದೇವರ ಹೆಸರು ಇಡುವ ಹಾಗಿಲ್ಲ. ಈ ಬಗ್ಗೆ ಮುಜರಾಯಿ ಸಚಿವರು, ಕಾನೂನು ಇಲಾಖೆಯ ಸಲಹೆ ಕೇಳಿದ್ದು, ಸಲಹೆ ನಂತರ ‌ಸರ್ಕಾರಿ ಆದೇಶ ಹೊರಬೀಳುವ ಸಾಧ್ಯತೆ ಇದೆ .