ಬೆಂಗಳೂರು: ಹೌದು. ಸರಕಾರ ಇನ್ಮುಂದೆ ಪಾರ್ಕ್‌ಗಳನ್ನು ತೆರೆಯುವುದಕ್ಕೆ ಅನುಮತಿ ನೀಡಿ ಆದೇಶ ಹೊರಡಿಸಿದೆ.

ಲಾಕ್‌ಡೌನ್‌ ವೇಳೆ ಜನದಟ್ಟಣೆಯೆಂದು ಪಾರ್ಕ್‌ಗಳನ್ನು ಮುಚ್ಚಿಸಲಾಗಿತ್ತು. ಹೀಗಾಗಿ ಪಾರ್ಕ್‌ನಲ್ಲಿ ವಾಕ್‌ ಸೇರಿದಂತೆ ವ್ಯಾಯಾಮ ಮಾಡುವವರಿಗೆ ತೊಂದರೆಯಾಗಿತ್ತು.

ಇದೀಗ ಕಂಟೋನ್ಮೆಂಟ್‌ ಜೋನ್‌ಗಳನ್ನು ಹೊರತುಪಡಿಸಿ ಉಳಿದ ಭಾಗಗಳಲ್ಲಿರುವ ಪಾರ್ಕ್‌ಗಳನ್ನು ತೆರೆಯುವುದಕ್ಕೆ ಅನುಮತಿ ನೀಡಲಾಗಿದ್ದು, ಅಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಪರಿಸ್ಥಿತಿಯನ್ನು ಅವಲೋಕಿಸಿ ಪಾರ್ಕ್‌ ತೆರೆಯುವ ಸಮಯ ನಿಗದಿ ಮಾಡಬಹುದಾಗಿದೆ.