ಬೆಂಗಳೂರು: ಹೊರ ರಾಜ್ಯಗಳಿಂದ ಬಂದವರಿಗೆ ಇನ್ನು ಮುಂದೆ ಉಚಿತ ಕೊರೋನಾ ಪರೀಕ್ಷೆ ಇರುವುದಿಲ್ಲ ಎಂದು ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ.

ರಾಜ್ಯ ಸರ್ಕಾರದ ವತಿಯಿಂದ ಉಚಿತವಾಗಿ ಕೊರೋನಾ ಟೆಸ್ಟ್ ಮಾಡಿಸಲಾಗುತ್ತಿತ್ತು. ಈಗ ಉಚಿತ ಟೆಸ್ಟ್ ಸೌಲಭ್ಯ ಸ್ಥಗಿತಗೊಳಿಸಲಾಗಿದೆ. 8 ಖಾಸಗಿ ಲ್ಯಾಬ್ ಗಳನ್ನು ಗುರುತಿಸಲಾಗಿದ್ದು, 650 ರೂ. ಪಾವತಿಸಿ ಹೊರಗಿನಿಂದ ಬಂದವರು ಕೊರೋನಾ ಪರೀಕ್ಷೆ ಮಾಡಿಸಿಕೊಳ್ಳಬೇಕಿದೆ.