ಬೆಂಗಳೂರು : ರಾಜ್ಯದಲ್ಲಿ ಬ್ಯಾಂಕ್ ಗಳಿಗೆ ಗ್ರಾಹಕರು ತೆರಳುವುದರಿಂದಾಗಿ ಕೊರೋನಾ ಸೋಂಕಿನ ಸಂಖ್ಯೆ ಏರಿಕೆಯಾದ ಕಾರಣ, ರಾಜ್ಯ ಸರ್ಕಾರ ರಾಜ್ಯದಲ್ಲಿನ ಎಲ್ಲಾ ಬ್ಯಾಂಕ್ ಗಳಿಗೆ ಹಾಲಿ ಇರುವಂತ 2ನೇ ಮತ್ತು 4ನೇ ಶನಿವಾರದ ರಜೆಯ ಜೊತೆಗೆ, ಇನ್ಮುಂದೆ ಎಲ್ಲಾ ಶನಿವಾರವೂ ಕೂಡ ರಜೆಯನ್ನು ನೀಡಿ ಆದೇಶಿಸಿದೆ.!

ಈ ಕುರಿತಂತೆ ರಾಜ್ಯ ಸರ್ಕಾರದ ಡಿಪಿಎಆರ್ ನ ಅಧೀನ ಕಾರ್ಯದರ್ಶಿ ಮೊಹ್ಮದ್ ನೀಮ್ ಮೊಮಿನ್ ಅವರು, ರಾಜ್ಯದಲ್ಲಿ ಸೆಕ್ಷನ್ 25ರ ನೆಗೋಷಿಬಲ್ ಇನ್ಟ್ರೂಮೆಂಟ್ಸ್ ಆಕ್ಟ್ 1881ರ ಅಡಿಯಲ್ಲಿ ಬ್ಯಾಂಕ್ ಗಳಿಗೆ 2ನೇ ಮತ್ತು 4ನೇ ಶನಿವಾರದ ಜೊತೆಗೆ, ಮುಂದಿನ ಆಗಸ್ಟ್ ಎರಡನೇ ವಾರದ ತನಕ ಎಲ್ಲಾ ಶನಿವಾರಗಳನ್ನು ರಜಾ ದಿನಗಳಾಗಿ ಘೋಷಣೆ ಮಾಡಲಾಗಿದೆ.!