ನವದೆಹಲಿ : ಈ ವರ್ಷ ಜೂ.1 ರಂದು ನೈರುತ್ಯ ಮುಂಗಾರು ಮಳೆ ಭಾರತ ಪ್ರವೇಶಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಮಳೆಗಾಲದ ವಾತಾವರಣ 2020 ಜೂನ್ 1 ರಿಂದ ಪ್ರಾರಂಭವಾಗಲಿದ್ದು, ಕೇರಳ ಕರಾವಳಿಯಿಂದ ಮುಂಗಾರು ಮಾರುತ ಪ್ರವೇಶಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಕೊರೊನಾ ಲಾಕ್ ಡೌನ್ ಸಂಕಷ್ಟದಿಂದ ಕಂಗೆಟ್ಟ ದೇಶದ ಆರ್ಥಿಕತೆಗೆ ಉತ್ತಮ ಬೆಳೆ ಕೊಂಚ ಮಟ್ಟಿಗೆ ಚೇತರಿಕೆ ನೀಡಬಹುದು. ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತ ಉಂಟಾದ ಹಿನ್ನೆಲೆ ಕೆಲವು ದಿನಗಳಿಂದ ಮಳೆಯಾಗುತ್ತಿದೆ. ಇನ್ನೂ ಮೂರ್ನಾಲ್ಕು ದಿನ ಮಳೆ ಮುಂದುವರೆಯಲಿದೆ ಎಂದು ಹೇಳಲಾಗಿದೆ.. ಈ ಬಾರಿಯ ಮುಂಗಾರು ಮಳೆ ಉತ್ತಮವಾಗಿರುವ ನಿರೀಕ್ಷೆಯಿದೆ.